ಬಳ್ಳಾರಿ

ವನ್ಯಜೀವಿ ಸಂರಕ್ಷಣೆಯ ಸಂದೇಶ ಸಾರಲು ‘ವನ್ಯಜೀವಿ ಜಾಗೃತಿ ರೈಡ್ 2026’

ವನ್ಯಜೀವಿ ಸಂರಕ್ಷಣೆಯ ಸಂದೇಶ ಸಾರಲು ‘ವನ್ಯಜೀವಿ ಜಾಗೃತಿ ರೈಡ್ 2026’


ಬಳ್ಳಾರಿ. ಆ . 02: ವನ್ಯಜೀವಿ ಸಂರಕ್ಷಣೆ, ಅರಣ್ಯ ಹಾಗೂ ನೈಸರ್ಗಿಕ ಆವಾಸಸ್ಥಳಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಿಸ್ಟನ್ ಬುಲ್ ರೈಡ್ಸ್‌ ಕ್ಲಬ್, ಸಂಜೀವಿನಿ ಆಟೋಮೊಬೈಲ್ಸ್‌ (2012ರಿಂದ) ಸಹಯೋಗದಲ್ಲಿ ಅ. 2ರಂದು ‘ವನ್ಯಜೀವಿ ಜಾಗೃತಿ ರೈಡ್ 2026’ ಆಯೋಜಿಸಿದೆ.ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ಈ ರೈಡ್‌ನಲ್ಲಿ ಬಳ್ಳಾರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೋಟಾರ್‌ಸೈಕಲ್ ಸವಾರರು ಭಾಗವಹಿಸಲಿದ್ದು, ಬಳ್ಳಾರಿಯಿಂದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರ ಉದ್ಯಾನವನದವರೆಗೆ ಸವಾರಿ ನಡೆಸಲಿದ್ದಾರೆ. 

ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣೆ, ಅರಣ್ಯಗಳ ರಕ್ಷಣೆ ಹಾಗೂ ಪ್ರಕೃತಿಯೊಂದಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುವುದು. ಉದ್ಯಾನವನದಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸವಾರರು ಊಟ ಹಾಗೂ ಕಮಲಾಪುರ ಸರೋವರಕ್ಕೆ ಭೇಟಿ ನೀಡಲಿದ್ದಾರೆ.  


ಸುದ್ದಿ ಓದಿ