ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ

ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ

ಬೆಳಗಾವಿ : ಒಂದೇ ಕಂಪನಿಯ 43 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಆರೋಪಿತನನ್ನು ಸಿನಿಮೀಯ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಬಂಧಿಸುವಲ್ಲಿ ಜಿಲ್ಲೆಯ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠ ರಾಮರಾಜನ್ ಕೆ ಅವರು ಇಂದಿಲ್ಲಿ ಹೇಳಿದರು. 

    ಜಿಲ್ಲೆಯ ಕಿತ್ತೂರು ಪೊಲೀಸ ಠಾಣೆಯಲ್ಲಿ ಬುಧವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಸೇರಿದಂತೆ ಕೆಲವು ಪ್ರದೇಶದಲ್ಲಿ ದ್ವಿಚಕ್ರ ವಾಹನಗಳು ಕಳ್ಳತನ ಅದರಲ್ಲಿ ಹಿರೊ ಹೊಂಡಾ ಸ್ಪ್ಯಾಲ್ಡಂರ್ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿದದ್ದವು. ಆದರ ಆಧಾರದ ಮೇಲೆ ಸಿಕ್ಕ ಸುಳಿವಿನ ಮೇಲೆ ಕಾರ್ಯಾಚರಣೆಗೆ ಇಳಿದ ಕಿತ್ತೂರು ಪೋಲಿಸ್ ರ ತಂಡವು ಕಾರ್ಯಚರಣೆ ನಡೆಸಿ, ಓರ್ವ ಆರೋಪಿತನನ್ನು ಬಂಧಿಸಿದ್ದಾರೆ ಎಂದರು. 

  ನಾರಾಯಣ ಮನೋಹರ ಕದಮ (ಸಾ: ಖಾನಾಪುರ ತಾಲೂಕಿನ ನಿಡಗಲ್ ಗ್ರಾಮ) ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ 43 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವದು ಪತ್ತೆಯಾಗಿದೆ. ಈತ ಕಳ್ಳತನ ಮಾಡಿರುವದರಲ್ಲಿ 41 ಸ್ಪ್ಲಾಂಡರ್ ವಾಹನಗಳು ಹಾಗೂ 1 ಪ್ಯಾಶನ್ ಮತ್ತು ಒಂದು ಎಚ್ ಎಫ್ ಡಿಲಕ್ಸ್ ವಾಹನಗಳು ಸೇರಿವೆ. 

     ಈತ ಬೆಳಗಾವಿ, ಗದಗ, ಉತ್ತರ ಕನ್ನಡ, ಧಾರವಾಡ- ಹುಬ್ಬಳ್ಳಿ,  ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದನು. ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ  ಒಟ್ಟು 25 ವಾಹನಗಳನ್ನು ಹಾಗೂ ಬೆಳಗಾವಿ ನಗರ ಪೊಲೀಸ ಆಯುಕ್ತರ ವ್ಯಾಪ್ತಿಯಲ್ಲಿ 8 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುತ್ತಾನೆ ಎಂದರು. 

 ಅದೇ ರೀತಿ ಧಾರವಾಡದಲ್ಲಿ 6, ಹುಬ್ಬಳ್ಳಿ 1, ಗದಗದಲ್ಲಿ 2, ಉತ್ತರ ಕನ್ನಡ ದಲ್ಲಿ 2 ಕಳ್ಳತನ ಮಾಡಲಾಗಿದ್ದನು. ಬಂಧಿತನಿಂದ ಒಟ್ಟು 43 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕಳ್ಳತನ ಮಾಡಿದ್ದ ಕೆಲವು ವಾಹನಗಳನ್ನು ಖಾನಾಪುರ ತಾಲೂಕಿನ ಮನೆಯಲ್ಲಿ ಇಟ್ಟಿರುವದು ಪತ್ತೆ ಮಾಡಲಾಗಿದೆ. 

  ಅಲ್ಲದೆ ಅಕ್ಕಪಕ್ಕದ ಗ್ರಾಮದ ಕೆಲ ರೈತರಿಗೆ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಮಾರಾಟಾ ಮಾಡಿರುವ ಪತ್ತೆ ಮಾಡಲಾಗಿದೆ. ಯಾರೇ ಆಗಲಿ ಜಿಲ್ಲೆಯಲ್ಲಿ ಹಳೆ ದ್ವಿಚಕ್ರ ವಾಹನ ಗಳನ್ನು ಖರೀದಿಸುವಾಗ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಎಸ್ ಪಿ ರಾಮರಾಜನ್ ಅವರು ನಾಗರಿಕರಲ್ಲಿ ಮನವಿ ಮಾಡಿದರು. ಇಲ್ಲಾದರೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಬರಬಹುದು ಎಂದರು.

   ಈ ಪೊಲೀಸ ತಂಡವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ ಬಸರಗಿ ಡಾ. ವೀರಯ್ಯ ಹಿರೇಮಠ, ಪೊಲೀಸ್ ಉಪಾಧೀಕ್ಷಕರು, ಬೈಲಹೊಂಗಲ ಇವರ ಮಾರ್ಗದರ್ಶನದಲ್ಲಿ ಶಿವಾನಂದ ಬಿ ಗುಡಗನಟ್ಟಿ, ಸಿ.ಪಿ.ಐ ಕಿತ್ತೂರ ವೃತ್ತ, ಭರತ್ ಎಸ್. ಪಿ.ಎಸ್.ಐ, (ಕಾ&ಸು) ಕಿತ್ತೂರ ಪೊಲೀಸ್ ಠಾಣಿ, ಜಿ.ಜಿ.ಹಂಪಣ್ಣವರ ಪಿ.ಎಸ್.ಐ (ಸಿಬಿ) ಕಿತ್ತೂರ ಠಾಣೆ ಹಾಗೂ ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಶರೀಪ್ ದಪೇದಾರ, ಅದೃಶ್ಯಪ್ಪ ಚಿಕ್ಕೇರಿ, ನಾಗರಾಜ ಕಡಗನ್ನವರ, ಸುನೀಲ ಮುರಗೋಡ, ಬಾಹುಬಲಿ ಅಗಸಿಮನಿ, ಹನಮಂತ ಜೀವಾಪೂರ, ಮತ್ತು ತನಿಖಾ ಸಹಾಯಕರಾದ ಎಮ್.ಬಿ.ಕಂಬಾರ, ಎಮ್.ಎಸ್.ಹಳ್ಳಿ, ಎಮ್.ಆರ್.ಲಮಾಣಿ ಮತ್ತು ಬೆಳಗಾವಿ ಟೆಕ್ನಿಕಲ್ ಸೆಲ್‌ನ ಸಚಿನ್ ಪಾಟೀಲ ಇವರುಗಳ ತಂಡವು ಯಶಸ್ವಿ

ಕಾರ್ಯಾಚರಣೆ ಮಾಡಿರುತ್ತಾರೆ. ತಂಡದ ಉತ್ತಮ ಪತ್ತೆ ಎಸ್ ಪಿ ಕೆ.ರಾಮರಾಜನ್ ಐಪಿಎಸ್, ಹೆಚ್ಚುವರಿ ಎಸ್ ಪಿ ಬಸರಗಿ  ಅವರು ಶ್ಲಾಘಿಸಿರುತ್ತಾರೆ.


   


ಸುದ್ದಿ ಓದಿ