ಬೆಳಗಾವಿ

ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮುಗಳಖೋಡ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕಬ್ಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.


ಪಾಲಬಾವಿ 01 :   ಸಮೀಪದ ಹಂದಿಗುಂದ ಗ್ರಾಮದಲ್ಲಿ ಮಾತೋಶ್ರೀ ಹೊನ್ನಮ್ಮ ಮಹಾದೇವ ದಿವಾಕರ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಜರುಗಿದ ರಾಯಬಾಗ ತಾಲೂಕು ಮಟ್ಟದ 17 ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಮುಗಳಖೋಡದ ಸಿದ್ದರಾಮೇಶ್ವರ ಪ್ರೌಢಶಾಲೆಯ ಬಾಲಕಿಯರ ತಂಡವು ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯೋಪಾಧ್ಯಾಯ ಡಿಎಂ ಬ್ಯಾಕೂಡ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಟ್ರೋಫಿ ವಿತರಿಸಿದರು.

ಕಬಡ್ಡಿ ವಿದ್ಯಾರ್ಥಿನಿಯರಾದ ಸ್ನೇಹಾ ಯಡವಣ್ಣವರ, ಅಮೃತಾ ಮಡಿವಾಳ, ದೀಪಾ ತೂಗದಲಿ, ಸ್ನೇಹಾ ಐಗಳಿ, ಅಕ್ಷತಾ ಸೋರಗಾವಿ , ತಸ್ಮೀಯ ಹನಗಿ, ಅಕ್ಷತಾ ಯಲ್ಲಟ್ಟಿ , ರೋಹಿಣಿ ಭಾನುಸೆ, ಸುಮಾ ಬೋರಗಾವಿ, ನೇತ್ರಾ ತೇಲಿ, ತ್ರಿವೇಣಿ ನಿಡವಣಿ, ಪ್ರೀತಿ ಜಾಧವ ಮುಖ್ಯ ತರಬೇತಿದಾರ ಬಿಬಿ ಬಂಡಿಗಣಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶಾಂತವೀರ ಬುರ್ಲಟ್ಟಿ , ಡಿಎಂ ಬ್ಯಾಕೂಡ, ಸಿಎಸ್ ಹಿರೇಮಠ, ಸುಕುಮಾರ ಗಳತಗಿ , ಪದ್ದು ಸಗರೆ, ಕುಮಾರ ಹಿರೇಮಠ, ಹಿರಿಯ ಶಿಕ್ಷಕ ಆರಿ​‍್ಸ ಕೊಟ್ಟಲಗಿ, ಪ್ರಲ್ಲಾದ ಅಥಣಿ, ಗಜಾನಂದ ಕಾಂಬಳೆ ಇದ್ದರು. 


ಸುದ್ದಿ ಓದಿ