ಬೆಳಗಾವಿ

ನ್ಯಾಯವಾಧಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ನ್ಯಾಯವಾಧಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ 

ಮೂಡಲಗಿ 01 : ಪಟ್ಟಣದ ನ್ಯಾಯವಾಧಿಗಳ ಸಂಘಕ್ಕೆ ಮುಂದಿನ ಎರಡು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಜರುಗಿತು. ಸಂಘದ ಒಟ್ಟು 82 ಸದ್ಯರಲ್ಲಿ 82 ಸದಸ್ಯರು ಮತ ಚಾಲಾಯಿಸಿದರು. ಚುನಾವಣೆಯಲ್ಲಿ ಅಧ್ಯಕ್ಷರಾಗಿ  ಬಲದೇವ ಸಣ್ಣಕ್ಕಿ, ಉಪಾಧ್ಯಕ್ಷರಾಗಿ ಲಕ್ಷ್ಮಣ ಅಡಿಹುಡಿ,  ಕಾರ್ಯಯಾಗಿ  ಸುಭಾಸ ತುಪ್ಪದ, ಸಹ ಕಾರ್ಯದರ್ಶಿಯಾಗಿ ರಾಮಪ್ಪ ಮುಂಡಿಗನಾಳ, ವಿನೋಧ ಪಾಟೀಲ, ಖಜಾಂಚಿ ಅಕ್ಕಮಹಾದೇವಿ ಗೋಡ್ಯಾಗೋಳ ಆಯ್ಕೆಯಾಗಿರುವರು. 

ಚುನಾವಣಾ ಅಧಿಕಾರಿಗಳಾಗಿ ವಕೀಲರಾದ ಎಂ. ಆಯ್‌. ಬಡಿಗೇರ, ಎಂ. ಎಲ್‌. ಸವಸುದ್ದಿ ಅವರು ಕಾರ್ಯನಿರ್ವಹಿಸಿದರು.  ನೂತನ ಪದಾಧಿಕಾರಿಗಳನ್ನು ಹಿಂದಿನ ಸಂಘದ ಪದಾಧಿಕಾರಿಗಳು ಮತ್ತು ವಕೀಲರು  ಸತ್ಕರಿಸಿ ಗೌರವುಸಿದರು. ಸತ್ಕಾರ ಸಮಾರಂಭದಲ್ಲಿ  ಸಂಘದ  ಮಾಜಿ ಅಧ್ಯಕ್ಷರಾದ ಎ. ಕೆ. ಮಾದಗನ್ನವರ, ಆರ್‌. ಆರ್‌. ಬಾಗೋಜಿ, ಕೆ. ಎಲ್‌. ಹುಣಶ್ಯಾಳ, ವಕೀಲರಾದ ಎ. ಎಸ್‌. ಕೌಜಲಗಿ, ಆಯ್‌. ಎಂ. ಹಿರೇಮಠ, ಎಲ್‌. ಬಿ. ವಡೇರ, ಎಸ್‌. ಎಸ್‌. ತುಪ್ಪದ, ಸುರೇಶ ಸಣ್ಣಕ್ಕಿ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು. 


ಸುದ್ದಿ ಓದಿ