ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ರಿಂದ ಗಣಪತಿ ದರ್ಶನ
ಶಿಗ್ಗಾವಿ, ಅ.1: ಪಟ್ಟಣದ ವೀರಗಲ್ಲಿಯ ಶಿಗ್ಗಾವಿ ಕಾ ರಾಜಾ ಗಣಪತಿ ಮೂರ್ತಿಗೆ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಉತ್ಸವ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಸದಸ್ಯರಾದ ವಸಂತ ಬಡ್ಡಿ, ರಮೇಶ್ ವನಹಳ್ಳಿ, ಸಿದ್ದಣ್ಣ ಮೊರಬದ, ಗುಡ್ಡಪ್ಪ ಜಲದಿ, ಗೌಸಖಾನ್ ಮುನಶಿ, ಶಂಕರಗೌಡ ಪಾಟೀಲ, ಚಂದ್ರು ಕೋಳಿವಾಡ, ಮಂಜುನಾಥ ತಿಮ್ಮಾಪುರ, ರಾಮು ಪೂಜಾರ, ಶಂಭು ನೇತೃತಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.