ಶಿಗ್ಗಾವ್

ಶಾಸಕ ಪಠಾಣ ಹೆಗಲಿಗೆ ಮೊತ್ತೊಂದು ಜವಾಬ್ದಾರಿ

ಶಾಸಕ ಪಠಾಣ ಹೆಗಲಿಗೆ ಮೊತ್ತೊಂದು ಜವಾಬ್ದಾರಿ


ಶಿಗ್ಗಾವಿ  25: ಉತ್ತರ ಕರ್ನಾಟಕ ಭಾಗದ ಬೆಳಗಾವಿ ಹಾಗೂ ಕಲ್ಬುರ್ಗಿ ವಿಭಾಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ಆಹಾರ ಗುಣಮಟ್ಟ,ಪೊರೈಕೆ ಸೇರಿದಂತೆ ಮೂಲಭೂತ ಸೌಕರ್ಯ ಪರೀಶೀಲನೆಗೆ ಶಿಗ್ಗಾವಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ಆದೇಶಿಸಿದೆ. ವರದಿಗಾರರೊಂದಿಗೆ ಮಾತನಾಡಿದ ಅವರು ಸಿ.ಎಂ. ಡಿ.ಕೆ.ಸಿ ಹಾಗೂ ಡಿ.ಸಿ.ಎಂ. ಪರಮೇಶ್ವರ ಅವರು ಈ ಗುರುತರ ಜವಾಬ್ದಾರಿಯನ್ನು ನನಗೆ ನೀಡಿ ರಾಜ್ಯ ಸರ್ಕಾರದ ಈ ಜವಾಬ್ದಾರಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಿಸಿದೆ, ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗ ವ್ಯಾಪ್ತಿಯ ವಸತಿ ಶಾಲೆಗಳಿಗೆ ಪ್ರವಾಸ ಮಾಡಿ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೂಲಭೂತವಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತೇನೆ ಎಂದರು. 


ಸುದ್ದಿ ಓದಿ