ಸಾರ್ವಜನಿಕ ಗಣಪತಿ ಮೂರ್ತಿಗಳಿಗೆ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಭೇಟಿ
ಶಿಗ್ಗಾವಿ, ಅ.1: ಪಟ್ಟಣದ ಐತಿಹಾಸಿಕ ಸಾರ್ವಜನಿಕ ಗಜಾನನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಚೌಡಿಕಟ್ಟಿ ಗಣಪತಿ ಮೂರ್ತಿಗೆ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಉತ್ಸವ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣಪತಿ ಮೂರ್ತಿಗಳಿಗೆ ಭೇಟಿ ನೀಡಿ ದರ್ಶನ ಪಡೆದ ಶಾಸಕರು, ಶ್ರೀ ಚೌಡಿಕಟ್ಟಿ ಗಣಪತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ನಾಡಿನಲ್ಲಿ ಬೀಕರ ಬರಗಾಲ ಸೇರಿದಂತೆ ಹಲವು ಸವಾಲುಗಳು ಎದುರಾಗುವ ಸಂದರ್ಭಗಳಿದ್ದು, ವಿಘ್ನ ನಿವಾರಕ ಶ್ರೀ ಗಣಪತಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ಸುಖ, ಶಾಂತಿ ಹಾಗೂ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದ ಜನರ ಸಹಕಾರ ಅಗತ್ಯವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಸದಸ್ಯರಾದ ಭರತೇಶ್ ಬಳಿಗಾರ, ಎಂ.ಕೆ. ಯಲಿಗಾರ, ಹಾಲೇಶ್ ಗೌಳಿ, ಗಜಾನನ ಶೇಜವಾಡಕರ, ಪ್ರಕಾಶ ಕುಲಕರ್ಣಿ, ಸಿದ್ದಣ್ಣ ಮೊರಬದ, ಹನುಮರೆಡ್ಡಿ ನಡುವಿನಮನಿ, ಗುಡ್ಡಪ್ಪ ಜಲದಿ, ಗೌಸಖಾನ್ ಮುನಶಿ, ಶಂಕರಗೌಡ ಪಾಟೀಲ, ಚಂದ್ರು ಕೋಳಿವಾಡ, ಮಂಜುನಾಥ ತಿಮ್ಮಾಪುರ, ರಾಮು ಪೂಜಾರ, ಶಂಭು ನೇತೃತಿ, ಆಶೀಫ್ ಕಣವಿ, ನೀರಮಣಿ, ವಸಂತ ಬಡ್ಡಿ, ರಮೇಶ್ ವನಹಳ್ಳಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.