ಶಿಗ್ಗಾವ್

ಸರ್ಕಾರ ಉರ್ದು ಹಬ್ಬದ ಆಚರಣೆ ನಿರ್ಧಾರದಿಂದ ಹಿಂದೆ ಸರದಿರುವುದು ಸ್ವಾಗತಾರ್ಹ: ಓಲೇಕಾರ

ಸರ್ಕಾರ ಉರ್ದು ಹಬ್ಬದ ಆಚರಣೆ ನಿರ್ಧಾರದಿಂದ ಹಿಂದೆ ಸರದಿರುವುದು ಸ್ವಾಗತಾರ್ಹ: ಓಲೇಕಾರ


  

ಶಿಗ್ಗಾವಿ  02 : ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸುವ ಕುರಿತು ಕರವೇ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಬಣ ಉರ್ದು ಹಬ್ಬದ ಆಚರಣೆಗೆ ಸಜ್ಜಾಗಿದ್ದ ಸರ್ಕಾರದ ವಿರುದ್ಧ ತೀವ್ರವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂತಹ ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಹಾಗೂ ಸರ್ಕಾರೇತರ ಕಾರ್ಯಕ್ರಮಗಳಿಗೆ ವಿಧಾನಸೌಧದಲ್ಲಿ ಅವಕಾಶವಿಲ್ಲ ಎಂದೂ ಸ್ಪಷ್ಟಪಡಿಸಿದ ಕಾರಣ ಸರ್ಕಾರ ಉರ್ದು ಹಬ್ಬದ ಆಚರಣೆ ನಿರ್ಧಾರದಿಂದ ಹಿಂದೆ ಸರದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಸ್ವಾಗತಿಸಿದ್ದಾರೆ. 


ಸುದ್ದಿ ಓದಿ