ಯರಗಟ್ಟಿ

ಯರಗಟ್ಟಿ ವಿದ್ಯಾರ್ಥಿಗೆ ರಾಜ್ಯಮಟ್ಟದ ಆಯ್ಕೆ

ಯರಗಟ್ಟಿ ವಿದ್ಯಾರ್ಥಿಗೆ ರಾಜ್ಯಮಟ್ಟದ ಆಯ್ಕೆ


ಯರಗಟ್ಟಿ 02: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ 17 ವರ್ಷದೊಳಗಿನ ವೈಯಕ್ತಿಕ ಕ್ರೀಡಾಕೂಟದಲ್ಲಿ ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪೌಢ ವಿಭಾಗದ 10ನೇ ತರಗತಿ ವಿದ್ಯಾರ್ಥಿ ಕುಮಾರ ಬಸವರಾಜ ಎಸ್‌. ಬಿರಾದಾರ ಪಾಟೀಲ ಅವರು ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ವಿದ್ಯಾರ್ಥಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೌದತ್ತಿ ಹಾಗೂ ದೈಹಿಕ ಶಿಕ್ಷಣ ಪರೀವೀಕ್ಷಕ ಸಂತೋಷ ಬಿರಾದಾರ,   ಅಧ್ಯಕ್ಷ ವಿಶ್ವಾಸ ವೈದ್ಯ, ಉಪಾಧ್ಯಕ್ಷ ಬಸಯ್ಯ ಸಾಲಿಮಠ, ಸದಸ್ಯರು, ಉಪಪ್ರಾಂಶುಪಾಲೆ ಶ್ರೀಮತಿ ಮಂಜುಳಾ ಲೋಕಣ್ಣವರ ಹಾಗೂ ದೈಹಿಕ ಶಿಕ್ಷಕರಾದ ಎಸ್‌.ಎಸ್‌. ಹೊಸಟ್ಟಿ, ಉಮೇಶ ಪಾಟೀಲ ಸೇರಿದಂತೆ ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ