ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಾಧನೆ
ಯರಗಟ್ಟಿ 01 : ಪಟ್ಟಣದ ತಿರಂಗಾ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳಾದ ಮನೋಜ ಎಂ. ಮಡಿವಾಳರ ಹಾಗೂ ಕುಮಾರಿ ಆದಿತಿ ಹಿರೇಮಠ ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸಾಧನೆ ತೋರಿದ್ದಾರೆ. ಇತ್ತೀಚೆಗೆ ಕಾಗವಾಡದಲ್ಲಿ ನಡೆದ ಜಪಾನ್ ಯಾಮಾಬುಂಕಿ ಶೀಟೊ- ರಿಯೋ ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದ 14 ವರ್ಷದ ವಯೋಮಿತಿ ವಿಭಾಗದಲ್ಲಿ ಮನೋಜ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಯ ಸಾಧನೆಗೆ ತಿರಂಗಾ ಕರಾಟೆ ಅಕಾಡೆಮಿ ತರಬೇತಿದಾರ ದೇಮು ನಾಯ್ಕ ಹಾಗೂ ತಂದೆ, ತಾಯಿ ಹಾಗೂ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.