ಯರಗಟ್ಟಿ

ಗಣೇಶೋತ್ಸವದಲ್ಲಿ ಜಾನಪದ ಸಂಗೀತ ರಸಮಂಜರಿ

ಗಣೇಶೋತ್ಸವದಲ್ಲಿ ಜಾನಪದ ಸಂಗೀತ ರಸಮಂಜರಿ

ಲೋಕದರ್ಶನ ವರದಿ 

ಯರಗಟ್ಟಿ ಸೆ.25: ಮನಸ್ಸಿಗೆ ಮುದ ನೀಡುವುದರ ಜೊತೆಗೆ ಉತ್ತಮ ಆರೋಗ್ಯಕ್ಕೂ ಸಂಗೀತ ಸಹಕಾರಿಯಾಗಿದೆ. ಸಂಗೀತವು ಮನಸ್ಸನ್ನು ಪ್ರಫುಲ್ಲಗೊಳಿಸುವುದರೊಂದಿಗೆ ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಹೊಂದಿದೆ ಎಂದು ಮುಖಂಡ ಅಶ್ವತ್ಥ ವಸಂತ ವೈದ್ಯ ಹೇಳಿದರು.  

ಪಟ್ಟಣದ ಹಿಂದೂ ಮಹಾ ಗಣಪತಿ ಸೂಳಕಟ್ಟಿ ಅಗಸಿ ಹಾಗೂ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಸಂಗೀತ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಗಣೇಶೋತ್ಸವವನ್ನು ಶಾಸ್ತ್ರೋಕ್ತವಾಗಿ ಹಾಗೂ ಭಕ್ತಿಯಿಂದ ಆಚರಿಸಬೇಕು. ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ವಿಘ್ನ ನಿವಾರಣೆಗಾಗಿ ಗಣಪತಿ ಪೂಜೆ ಮಾಡುವ ಪದ್ಧತಿ ಇದೆ ಎಂದರು.  

ಕಾರ್ಯಕ್ರಮದಲ್ಲಿ ನಾಗಪ್ಪ ಕಾಮಣ್ಣವರ, ವೀರೇಶ ಬ್ಯಾಹಟ್ಟಿ, ಚಂದ್ರು ಜಂಬ್ರಿ, ಚಂದ್ರು ಮುಚ್ಚಂಡಿ, ಜಗದೀಶ ಬಡಿಗೇರ, ಪ್ರಕಾಶ ಕಾಮಣ್ಣವರ, ಮಲ್ಲಿಕಾರ್ಜುನ ಕಮತಗಿ ಸೇರಿದಂತೆ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ರವಿ ನಲಗೆ ತಂಡದವರು ಜಾನಪದ ಸಂಗೀತ ರಸಮಂಜರಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ದಾನಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. 


ಸುದ್ದಿ ಓದಿ