ಪರಿಶೋಧನಾ ಪ್ರವಾಸ: ಅ.4ರಂದು ವಿಜಯಪುರಕ್ಕೆ ಪ್ರಕಾಶ್ ರಾಜ್
ವಿಜಯಪುರ 02: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ಮತದಾರರ ಹಕ್ಕುಗಳು, ಪಟ್ಟಿಯಲ್ಲಿನ ಲೋಪದೋಷಗಳು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಪರೀಶೀಲಿಸುವ ಉದ್ದೇಶದಿಂದ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ಖ್ಯಾತ ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಅಕ್ಟೋಬರ್ 4ರಂದು ವಿಜಯಪುರಕ್ಕೆ ಆಗಮಿಸಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮ: ದಿನಾಂಕ: ಅಕ್ಟೋಬರ್ 4, 2026, ಭಾನುವಾರ
ಸಿಸಮಯ: ಸಂಜೆ 5ರಿಂದ 7ರವರೆಗೆ
ಸಿಸ್ಥಳ: ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಜಂತರ ಮಂತರ), ಸ್ಟೇಷನ್ ರಸ್ತೆ, ವಿಜಯಪುರ
ಕಾರ್ಯಕ್ರಮದಲ್ಲಿ ನಾಗರಿಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರಕ್ರಿಯೆಯಲ್ಲಿನ ಸಾರ್ವಜನಿಕರ ಅನುಭವಗಳು, ಮತದಾರರ ಪಟ್ಟಿಯ ಸಮಸ್ಯೆಗಳು ಹಾಗೂ ದಾಖಲೆಗಳ ಪರೀಶೀಲನೆ ಕುರಿತು ಚರ್ಚೆ ನಡೆಯಲಿದೆ.
ರಾಜ್ಯದ ಆಯ್ದ 100 ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯ ಪರಿಶೋಧನೆ ನಡೆಸಿ, ಸಮಸ್ಯೆ ಎದುರಿಸುತ್ತಿರುವ ಮತದಾರರಿಂದ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ನಾಗರಿಕ ವರದಿ ಸಿದ್ಧಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ‘ಮತ ಕಾವಲು ಸಮಿತಿ ವಿಜಯಪುರ’ ತಿಳಿಸಿದೆ. ಕಾರ್ಯಕ್ರಮದಲ್ಲಿ ನಾಗರಿಕರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.