ಕಾಂಗ್ರೇಸ್ ಮುಖಂಡರಿಂದ ನೀರಲಗಿಗೆ ಸನ್ಮಾನ
ಶಿಗ್ಗಾವಿ 25: ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸತತ 2 ನೇ ಭಾರಿ ಜಿಲ್ಲಾ ಆದ್ಯಕ್ಷರಾಗಿ ಆಯ್ಕೆಯಾದ ಸಂಜೀವಕುಮಾರ ನೀರಲಗಿ ಅವರನ್ನು ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ಪಾಟೀಲ, ಮುಖಂಡರಾದ ಮಂಜುನಾಥ ಮಣ್ಣಣ್ಣವರ, ಮುಕ್ತಾರಖಾನ ತಿಮ್ಮಾಪೂರ, ವಸಂತ ಬಡ್ಡಿ, ಗದಿಗೆಪ್ಪ ಬಳ್ಳಾರಿ, ಹಾವೇರಿ ಬ್ಲಾಕ್ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಶಂಕರ ಮೆಹರವಾಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.