ಬೆಳಗಾವಿ

ಬೆಳಗಾವಿ ರಾಜ್ಯ ಅವಿಭಾಜ ಅಂಗವೆಂದು ಅಂಗಿಕಾರ, ಮೂಡಲಗಿಯಲ್ಲಿ ವಿಜಯೋತ್ಸವ

ಬೆಳಗಾವಿ ರಾಜ್ಯ ಅವಿಭಾಜ ಅಂಗವೆಂದು ಅಂಗಿಕಾರ, ಮೂಡಲಗಿಯಲ್ಲಿ ವಿಜಯೋತ್ಸವ

ಲೋಕದರ್ಶನ ವರದಿ 

ಮೂಡಲಗಿ 01 : ಬೆಳಗಾವಿಯು ಕರ್ನಾಟಕ ರಾಜ್ಯ ಅವಿಭಾಜದ ಅಂಗವೆಂದು ಬೆಳಗಾವಿ ಮಹಾನಗರ ಪಾಲಿಕೆಯು ಘೋಷಣೆ ಮಾಡಿದ್ದರಿಂದ ಮೂಡಲಗಿ ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತದಲ್ಲಿ ಸಂಜೆ ಪಟಾಕಿ ಸಿಡಿಸಿ ಮತ್ತು ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.  

ಜಯ ಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚರಡ್ಡಿ ಮಾತನಾಡಿ, ಬೆಳಗಾವಿಯನ್ನು ರಾಜ್ಯದ ಅವಿಭಾಜ ಅಂಗ ಎಂದು ಘೋಷಿಸಬೇಕೆಂದು ಕಳೆದ ಆರು ತಿಂಗಳಿಂದ ಅವಿರತ ಹೋರಾಟ ಮಾಡಲಾಗುತ್ತಿತು, ಇಂದು ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಬೆಳಗಾವಿ ಅವಿಭಾಜ ಅಂಗವೆಂದು ಅಂಗಿಕಾರ ಮಾಡಿರುವುದು ಕನ್ನಡ ಪರ ಸಂಘಟಣೆಗಳಿಗೆ ಮತ್ತು ಕನ್ನಡಾಭಿಮಾನಿಗಳಿಗೆ ಸಂತಸದ ವಿಷಯ ಎಂದರು.  

ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ ಅಂಗವೆಂದು ಘೋಷಿದರಿಂದ ಈ ದಿನ ಐತಿಹಾಸಿಕ ದಿನವಾಗಿದೆ, ಅಂಗಿಕಾರಕ್ಕೆ ಸಹಕಾರಿಸಿದ ಪಾಲಿಕೆಯ ಮಹಾಪೌರ ಮತ್ತು ಉಪ ಮಹಾಪೌರ ಹಾಗೂ ಸದಸ್ಯರಿಗೆ, ಅಧಿಕಾರಿಗಳಿಗೆ ಹರ್ಷ ವ್ಯಕ್ತ ಪಡಿಸಿ ಅಭಿನಂಡಿಸಿದರು. ಈ ಸಮಯದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಮೆಳ್ಳಿಗೇರ ಪದಾಧಿಕಾರಿಗಳು ಹನುಮಂತ ಸಣ್ಣಕಿ,್ಕ ಆನಂದ ಜಂಡೇಕುರಬರ, ರಾಕೇಶ್ ಪರಸನ್ನವರ, ರಮೇಶ್ ಮರಣೂರ, ಪ್ರಕಾಶ ಹಾದಿಮನಿ, ಶಂಕರ ಢವಳೇಶ್ವರ, ಅಕ್ಷಯ ನೇಮಗೌಡರ, ಈರ​‍್ಪ ಉಪಸ್ಥಿತರಿದ್ದರು. 


ಸುದ್ದಿ ಓದಿ