ಬೆಳಗಾವಿ

ಪಜಾ , ಪಪಂ ಸಮುದಾಯ ಜನರನ್ನು ಸಂಘದಲ್ಲಿ ಬಿನ್ ಸಾಲಗಾರ ಶೇರು ಮಾಡಿಕೊಳ್ಳಬೇಕು: ಪ್ರಕಾಶ ದಿವಾಕರ

ಪಜಾ , ಪಪಂ ಸಮುದಾಯ ಜನರನ್ನು ಸಂಘದಲ್ಲಿ ಬಿನ್ ಸಾಲಗಾರ ಶೇರು ಮಾಡಿಕೊಳ್ಳಬೇಕು: ಪ್ರಕಾಶ ದಿವಾಕರ
People from SC and ST communities should be enrolled as 'nominal shareholders' in the society: Praka


ಪಾಲಬಾವಿ: ಕಪ್ಪಲಗುದ್ದಿ ಗ್ರಾಮದ ದಲಿತ ಸಮುದಾಯದ ಜನರಿಗೆ ಗ್ರಾಮದಲ್ಲಿರುವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಬಿನ್ ಸಾಲಗಾರರೆಂದು ಶೇರು ಮಾಡಿಕೊಳ್ಳಬೇಕು. ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರೇ ಇರುವುದರಿಂದ ಪಿಕೆಪಿಎಸ್ ಸಂಘದಲ್ಲಿ ದೊರಕುವ ಸೌಲಭ್ಯಗಳು ಬಡವರಿಗೆ ಸಾಲರಹಿತ ಬಿನ್ ಸಾಲಗಾರರಿಗೆ ಸಿಗಲಿ, ಪಜಾ/ಪಪಂ ಜನರು ಅಪಘಾತ ಹಾಗೂ ಅನಾರೋಗ್ಯಕ್ಕೆ ಒಳಪಟ್ಟರೆ ಸಂಘದ ಸೇರದಾರರಿಗೆ 5ಲಕ್ಷದ ವರೆಗೆ ಜೀವವಿಮೆ  ಸೌಲಭ್ಯವಿದೆ. ಆ ಯೋಜನೆಯ ಸೌಲಭ್ಯಗಳು ಗ್ರಾಮದ ಕೂಲಿ ಕಾರ್ಮಿಕ ಬಡವ ಜನರಿಗೆ ಸಿಗಲಿ.

ಆದ್ದರಿಂದ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರು ಎಲ್ಲ ಫಲಾನುಭವಿಗಳ ಅರ್ಜಿಯನ್ನು ಸ್ವೀಕರಿಸಿ ಎಲ್ಲರನ್ನೂ ಬಿನ್ ಸಾಲುಗಾರರೆಂದು ಶೇರು ಷೇರು ಮಾಡಿಕೊಂಡು ಎಲ್ಲರಿಗೂ ಸಹಕಾರದ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಸಮಾಜದ ಮುಖಂಡರು, ನಿವೃತ್ತ ಪ್ರಧಾನಗಳು ಪ್ರಕಾಶ ದಿವಾಕರ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು. ಅವರು ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಯ ಮುಂಭಾಗದಲ್ಲಿ (ಅ.12) ರಂದು ಸೋಮವಾರ ಮುಂಜಾನೆ 11 ಗಂಟೆಗೆ  ಸಂಘದ ಅಧ್ಯಕ್ಷ ಶಿವಪ್ಪ ದಡ್ಡಿಮನಿ, ಉಪಾಧ್ಯಕ್ಷ ಮಹಾಲಿಂಗಪ್ಪ ಅಂಗಡಿ, ಮುಖ್ಯ ಕಾರ್ಯನಿರ್ವಾಹಕ ಮಹಾದೇವ ಮುಸಿರವರಿಗೆ ಗ್ರಾಮದ ಪಜಾ /ಪಪಂ ಸಮುದಾಯದ ನೂರಕ್ಕೂ ಅಧಿಕ ಜನರು "ಬಿನ್ನ ಸಾಲಗಾರರೆಂದು ಶೇರು" ಮಾಡಿಕೊಳ್ಳಿ ಎಂದು ಅರ್ಜಿ ಸಲ್ಲಿಸುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಘದ ಅಧ್ಯಕ್ಷ ಶಿವಪ್ಪ ದಡ್ಡಿಮನಿ, ಪಿಡಿಒ ಶ್ರೀಕಾಂತ ಯಡ್ರಾಂವಿ ಸಭೆಯಲ್ಲಿ ಮಾತನಾಡಿದರು.

ಸುದ್ದಿ ಓದಿ