ತಾಳಿಕೋಟಿ

ತಾಳಿಕೋಟೆಯಲ್ಲಿ ಯುವ ಸಂಸತ್ ಅಧಿವೇಶನ

ತಾಳಿಕೋಟೆಯಲ್ಲಿ ಯುವ ಸಂಸತ್ ಅಧಿವೇಶನ

        ತಾಳಿಕೋಟಿ: ತಾಲೂಕ ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಕಾನೂನು ನ್ಯಾಯ ಮತ್ತು ಉನ್ನತ ಶಿಕ್ಷಣಗಳ ಇಲಾಖೆಗಳ ಸಹಯೋಗದಲ್ಲಿ ತಾಲೂಕ ಮಟ್ಟದ ಯುವ ಸಂಸತ್ ಅಧಿವೇಶನ ಕಾರ್ಯಕ್ರಮವು ಸೋಮವಾರ ಸ್ಥಳೀಯ ಎಸ್ ಕೆ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ತಹಶೀಲ್ದಾರ್ ಎಂಎಸ್ ಅರಕೇರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಆರ್ ಬಿ ದಮ್ಮೂರಮಠ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

         ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ಸುಮಾರು 112 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾಧ್ಯಕ್ಷರಾದ ಆದಿಯೋಗಿ ಸದಾಶಿವಯ್ಯ ಅರಕೇರಿಮಠ ಅವರು ಸದನವನ್ನು ಅತ್ಯಂತ ಶಿಸ್ತುಬದ್ಧವಾಗಿ ನಡೆಸಿಕೊಟ್ಟರು. ಅಧಿವೇಶನದಲ್ಲಿ ರೈತರ ಸಮಸ್ಯೆಗಳು ಮಹಿಳಾ ಸಬಲೀಕರಣ ಹಾಗೂ ತಾಜ್ಯ ವಸ್ತು ವಿಲೇವಾರಿ ಈ ಮೂರು ವಿಧೇಯಕಗಳನ್ನು ಮಂಡಿಸಲಾಯಿತು. ಸಂಸತ್ತಿನ ಚರ್ಚೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಬಿ.ಜಿ.ಮಠ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

          ಈ ಸಂದರ್ಭದಲ್ಲಿ 117 ವಿದ್ಯಾರ್ಥಿಗಳನ್ನು ಜಿಲ್ಲಾ ಮಠದ ಸಂಸತ್ ಅಧಿವೇಶನಕ್ಕೆ ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ.ಅಜೇಯ್ ಅಬ್ಬಾರ, ಗುಂಡೂರಾವ್ ಧನಪಾಲ, ನಿಲಯ ಪಾಲಕರಾದ ಎಸ್ ಎನ್ ಮಲ್ಲಾಡೆ, ಎಸ್ ಎಂ ಕಲಬುರ್ಗಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ