ಮುದ್ದೆಬಿಹಾಲ್

ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಆಹಾರ ಕಿಟ್ ವಿತರಣೆ

ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಆಹಾರ ಕಿಟ್ ವಿತರಣೆ


​ಮುದ್ದೇಬಿಹಾಳ: ತಮ್ಮ ನಿರಂತರ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಕೆಲಸಗಳ ಮೂಲಕ ಕ್ಷೇತ್ರದ ಜನರ ಮನಗೆದ್ದಿರುವ ಸ್ಥಳೀಯ ಶಾಸಕರು, ಕೆ.ಎಸ್.ಡಿ.ಎಲ್. (KSDL) ನಿಗಮದ ಅಧ್ಯಕ್ಷರಾದ *ಸನ್ಮಾನ್ಯ ಶ್ರೀ ಅಪ್ಪಾಜಿ ನಾಡಗೌಡ (ಸಿ.ಎಸ್. ನಾಡಗೌಡ)* ಅವರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ, ಅವರ ಅಭಿಮಾನಿ  ಮುತ್ತು ಚಲವಾದಿ ಮುದ್ದೇಬಿಹಾಳದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ  ಬಡ ರೋಗಿಗಳಿಗೆ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.​

*ಅಪ್ಪಾಜಿ ನಾಡಗೌಡರ ತತ್ತ್ವ ಸಿದ್ಧಾಂತವೇ ನಮಗೆ ಪ್ರೇರಣೆ* :​ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ *ಮುತ್ತು ಚಲವಾದಿ ನೇಬಗೇರಿ* ಅವರು, "ನಮ್ಮ ಶಾಸಕರಾದ ಶ್ರೀ ಅಪ್ಪಾಜಿ ನಾಡಗೌಡರು ಸದಾ ಬಡವರ, ದೀನದಲಿತರ ಮತ್ತು ಸಂಕಷ್ಟದಲ್ಲಿರುವವರ ಸೇವೆಯನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ.

ಅವರ ಜನಪರ ಕಾಳಜಿ ಹಾಗೂ ಕಳಕಳಿಯ ಸಮಾಜಸೇವೆಯಿಂದ ಪ್ರೇರಿತರಾಗಿ, ನಾವು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನೆರವಿನ ಹಸ್ತ ಚಾಚಿದ್ದೇವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ," ಎಂದು ಹೇಳಿದರು.​ *ರೋಗಿಗಳು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ: *​ಆಸ್ಪತ್ರೆಯ ಹತ್ತಾರು ಬಡ ರೋಗಿಗಳಿಗೆ ಪೌಷ್ಟಿಕ ಹಾಗೂ ಅಗತ್ಯ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್‌ಗಳನ್ನು ವಿತರಿಸಿದ್ದಕ್ಕೆ ರೋಗಿಗಳು ಹಾಗೂ ಅವರ ಸಂಬಂಧಿಕರು ಸಂತಸ ವ್ಯಕ್ತಪಡಿಸಿ,

ಶಾಸಕರಿಗೆ ಹಾಗೂ ಯುವ ಮುಖಂಡ ಮುತ್ತು ಚಲವಾದಿ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.​ಈ ಸಂದರ್ಭದಲ್ಲಿ ಮಹಮದ್ ರಫೀಕ್ ಶಿರೋಳ,ಸಮೀರ್ ದ್ರಾಕ್ಷಿ,ಸಂಗಮೇಶ್ ನೇಬಗೇರಿ,ಯಮನೂರಿ ಮುಕಿಹಾಳ,ಸಾಗರ್ ಚಲವಾದಿ,ಸಾಗರ್ ಹುನಕುಂಟಿ,ನೀಲಮ್ಮ ಚಲವಾದಿ,ಅಕ್ಷತಾ ಚಲವಾದಿ,ಸುಜಾತಾ ಸಿಂದೆ,ನಾಗಮ್ಮ ಬಿರಾದಾರ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಸುದ್ದಿ ಓದಿ