ಬೆಳಗಾವಿ

ಕತ್ತಲನ್ನು ಹೊಗಲಾಡಿಸಿ ಬೆಳಕು ಹರಿಸುವುದೇ ನವರಾತ್ರಿ-ನಾರಾಯಣ ಶರಣರು

ಕತ್ತಲನ್ನು ಹೊಗಲಾಡಿಸಿ ಬೆಳಕು ಹರಿಸುವುದೇ ನವರಾತ್ರಿ-ನಾರಾಯಣ ಶರಣರು

ಲೋಕದರ್ಶನ ವರದಿ 


ಘಟಪ್ರಭಾ: ಮನುಷ್ಯನ ಜೀವನದಲ್ಲಿ ಕತ್ತಲನ್ನು ಹೊಗಲಾಡಿಸಿ ಬೆಳಕು ಹರಿಸುವುದೇ ನವರಾತ್ರಿ ಎಂದು ವಡೇರಹಟ್ಟಿಯ ಶ್ರೀ ಅಂಬಾದರ್ಶನ ಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ನಾರಾಯಣ ಶರಣರು ಹೇಳಿದರು. ಅವರು ರವಿವಾರ ಸಂಜೆ ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

  ದೀಪ ಹಚ್ಚಿ ಒಂಬತ್ತು ದಿನಗಳವರೆಗೆ ಆರದಂತೆ ನೋಡಿಕೊಳ್ಳುವುದೇ ನವರಾತ್ರಿ ಆಚರಿಸಬೇಕು. ಬಯಸಿ ಬಂದಿದ್ದು ಅಂದಭೋಗ, ಬಯಸದೇ ಬಂದಿದ್ದು ಅಂಬಾಭವಾನಿ ಭೋಗ ಎಂದರು. ಅಂಬಾಭವಾನಿ ದೇವಿಯ ಪಾರಾಯಣ ಮಾಡುತ್ತಿರುವುದು ಶ್ಲಾಘನೀಯ. ದೇವಿ ಕೃಪಾ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ, ನಿಮ್ಮ ಜೀವನದಲ್ಲಿ ಕಷ್ಟ ಕಾರ​‍್ಪಣಯಗಳನ್ನು ದೂರ ಮಾಡುವ ಶಕ್ತಿ ಅಂಬಾಭವಾನಿ ದೇವಿಗೆ ಇದೆ. ನಿಮ್ಮ ಬಾಳು ಹಸನ್ಮೂಖಿಯಾಗಲಿ ಎಂದು ಹೇಳಿದರು. 

ಬೆಳಿಗ್ಗೆ ಶ್ರೀ ದುರ್ಗಾಮಾತಾ ದೌಡ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು. ಸಂಜೆ  ದೇವಸ್ಥಾನದಲ್ಲಿ ಘಟಸ್ಥಾಪನೆ ಕಾರ್ಯಕ್ರಮ ವೈಭವದಿಂದ ಜರುಗಿತು. ನವರಾತ್ರಿ ಮೊದಲ ದಿನ 201 ಆರಾಧಕರಿಂದ ಸಾಮೂಹಿಕ ಶ್ರೀದೇವಿ ಮಹಾತ್ಮೆ ಗ್ರಂಥ ಪಾರಾಯಣ ಜರುಗಿತು. ಶ್ರೀ ದೇವಿ ಉತ್ಸವ ಮೂರ್ತಿಗೆ ತುಲಾಭಾರ ಸೇವೆಯನ್ನು ಶರಣ ಬಾಳಪ್ಪ ನೌಕಡೆ ದಂಪತಿಗಳಿಂದ ಜರುಗಿತು. ವಿವಿಧ ಸೇವೆ ಸಲ್ಲಿಸಿದ ಸದ್ಭಕ್ತರಿಗೆ ಗೌರವ ಸನ್ಮಾನ ಜರುಗಿತು. 

ಶರನ್ನವರಾತ್ರಿ ಉತ್ಸವವನ್ನು ದೇಸಾಯಿ ಮನೆತನದ ತ್ರಿಶೀಲಾದೇವಿ ರಾಮಪ್ರೀಯ ಪಾಟೀಲ ದೇಸಾಯಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನೇತ್ರತ್ವವನ್ನು ಜ್ಯೋತಿಭಾ ಸಾಳೊಂಕೆ,  ಅಧ್ಯಕ್ಷತೆ ಮಾರುತಿ ಜಾಧವ, ಮುಖ್ಯ ಅತಿಥಿಗಳಾಗಿ ದೇವಋಷಿಗಳಾದ ಬಸಪ್ಪ ಕಬ್ಬೂರ, ಮುರೇಪ್ಪ ಪೂಜೇರಿ, ಶಾಹನವಾಜ ಮಕಾನದಾರ, ಅರ್ಚಕರಾದ ಮಲ್ಲಿಕಾರ್ಜುನ ವಸ್ತ್ರದ, ಅಜೀತ ಬಡಿಗೇರ, ಯುವ ಮುಖಂಡ ಸಿದ್ಧಾರೂಢ ಕಂಬಾರ, ಮರಾಠಾ ಸಮಾಜದ ಅಧ್ಯಕ್ಷ ನಾರಾಯಣ ಜಗದಾಳೆ ಉಪಸ್ಥಿರಿದ್ದರು. ಶಿಕ್ಷಕ ಸದಾನಂದ ಗಾಯಕವಾಡ ಕಾರ್ಯಕ್ರಮ ಸ್ವಾಗತಿಸಿ,ನಿರೂಪಿಸಿದರು. 


ಸುದ್ದಿ ಓದಿ