ಬೆಳಗಾವಿ

ಹತ್ತರಗಿ ಕಾರಿಮಠ ಹಳ್ಳಕ್ಕೆ ಬ್ರಿಜ್ ಕಮ್ ಬಾಂಧಾರಕ್ಕೆ ಸಚಿವರ ಒಪ್ಪಿಗೆ

ಹತ್ತರಗಿ ಕಾರಿಮಠ ಹಳ್ಳಕ್ಕೆ ಬ್ರಿಜ್ ಕಮ್ ಬಾಂಧಾರಕ್ಕೆ ಸಚಿವರ ಒಪ್ಪಿಗೆ

ಲೋಕದರ್ಶನ ವರದಿ   

ಯಮಕನಮರಡಿ 11 : ಸಮೀಪದ ಹತ್ತರಗಿ ಕಾರಿಮಠ ಹಳ್ಳಕ್ಕೆ ಬ್ರಿಜ್ ಕಮ್ ಬಾಂಧಾರವನ್ನು ನಿರ್ಮಿಸಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿ ಕೊಡುವುದಕ್ಕಾಗಿ ಬಹುದಿನಗಳ ಬೇಡಿಕೆಯಾಗಿದ್ದಹತ್ತರಿಗಿ ರೈತ ಸಂಘದ ಮನವಿಯನ್ನು ಸಚಿವರು ಸ್ಪಂದಿಸಿ ಸ್ವೀಕರಿಸಿ ತಮಗೆ ಕೂಡಲೇ ಸ್ಥಳ ಪರೀಶೀಲಿಸಿ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆಯನ್ನು ದಿನಾಂಕ 11 ರಂದು ಗೋಕಾಕ್ ಗ್ರಹ ಕಚೇರಿಯಲ್ಲಿ ಭೇಟಿ ನೀಡಿ ಹತ್ತರಿಗಿ ರೈತ ಸಂಘದ ಪರವಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು, ಈ ಕುರಿತು ಸಚಿವರು ತಮ್ಮ ಮೆಚ್ಚಿಗೆ ವ್ಯಕ್ತಪಡಿಸಿ ಕೂಡಲೇ ತಮಗೆ ನೀರಾವರಿ ಸೌಲಭ್ಯ ಬದುಕಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರಾದ ವಿಲಾಸ್ ತವಗ ಗೌರವ ಅಧ್ಯಕ್ಷರಾದ ಕೆಂಪಣ್ಣ ಖತದಲ್ಲಿ ಕಾರ್ಯದರ್ಶಿ ಅಜ್ಜಪ್ಪ ಬಟೋಳಿ ರಾಮಲಿಂಗ ಕುಂಬಾರ ವಿನೋದ್ ಹಲದೇವರ ಮಠ ಹಾಗೂ ಸಚಿವರ ಆತ್ಮೀಯ ಪತ್ರಕರ್ತ ಸಹಾಯಕರಾದ ಗೋಪಾಲ ಚಪನಿ ಹಾಗೂ ನಾಗರಾಜ್ ದುಂದೂರ್ ಉಪಸ್ಥಿತರಿದ್ದು ಸಚಿವರಿಗೆ ಮನವರಿಕೆ ಮಾಡಿಮನವಿ ಪತ್ರ ಸಲ್ಲಿಸಲಾಯಿತು ಅಲ್ಲದೆ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಕಾಮಗಾರಿಗಳನ್ನು ಅರ್ಧಮಟ್ಟಕ್ಕೆ ನಿಂತಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು ಕೂಡಲೆ ರಸ್ತೆಗಳ ಪರೀಶೀಲನೆಯನ್ನು ಮಾಡಲು ಆಪ್ತ ಸಹಾಯಕರಿಗೆ ಸಚಿವರು ತಿಳಿಸಿದರು. 


ಸುದ್ದಿ ಓದಿ