ಬೆಳಗಾವಿ

ಭಾರತ ವಾಹನ ತರಬೇತಿ ಶಾಲೆಯಿಂದ ರಸ್ತೆ ಸುರಕ್ಷತೆ, ವಾಹನ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ

ಭಾರತ ವಾಹನ ತರಬೇತಿ ಶಾಲೆಯಿಂದ ರಸ್ತೆ ಸುರಕ್ಷತೆ, ವಾಹನ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ
Road Safety, Vehicle Maintenance, and Technical Training Program by the India Vehicle Training Schoo

ಲೋಕದರ್ಶನ ವರದಿ  

     ಬೆಳಗಾವಿ 10:  ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ವಾಹನಗಳ ನಿಯಮಿತ ನಿರ್ವಹಣೆ ಮತ್ತು ಚಾಲಕರಿಗೆ ತಾಂತ್ರಿಕ ತರಬೇತಿ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಡಿ.ಎಸ್‌.ಎಸ್‌. ರಾಜ್ಯಾಧ್ಯಕ್ಷ ಕೆ.ವಿ. ಬಾಲಕೃಷ್ಣ ಹೇಳಿದರು. ನಗರದ ನೆಹರೂ ನಗರದಲ್ಲಿರುವ ಭಾರತ ವಾಹನ ತರಬೇತಿ ಶಾಲೆಯ ಕಚೇರಿಯಲ್ಲಿ ಶಾಲೆಯ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತೆ, ವಾಹನ ನಿರ್ವಹಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ವಾಹನಗಳನ್ನು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಚಲಾಯಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆ ಕೇವಲ ನಮ್ಮ ಜೀವದ ರಕ್ಷಣೆಗೆ ಮಾತ್ರ ಸೀಮಿತವಾಗಿರದೆ, ರಸ್ತೆಯಲ್ಲಿ ಸಂಚರಿಸುವ ಇತರರ ಜೀವದ ಸುರಕ್ಷತೆಗೂ ಮುಖ್ಯವಾಗಿದೆ. ಕಳೆದ ನಾಲ್ಕು ದಶಕಗಳಿಂದ ವಾಹನ ತರಬೇತಿ ಕ್ಷೇತ್ರದಲ್ಲಿ ಭಾರತ ವಾಹನ ತರಬೇತಿ ಶಾಲೆ ಉತ್ತಮ ಹೆಸರು ಗಳಿಸಿದೆ. ಈ ಶಾಲೆಯಲ್ಲಿ ತರಬೇತಿ ಪಡೆದವರು ಸಮರ್ಥವಾಗಿ ವಾಹನ ಚಲಾಯಿಸುವಂತಾಗಿದ್ದಾರೆ. ಉತ್ತಮ ಪ್ರಖ್ಯಾತಿ ಗಳಿಸಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಬೃಹತ್ತವಾಗಿ ಬೆಳೆಯಲಿ ಎಂದು ಹಾರೈಸಿದರು. 

ರಾಜ್ಯ ಡ್ರೈವಿಂಗ್ ಶಾಲೆಗಳ ಒಕ್ಕೂಟದ ಉಪಾಧ್ಯಕ್ಷ ಎಲ್ಲಪ್ಪ ದೊಡ್ಡಮನಿ ಮಾತನಾಡಿ, ವಾಹನ ತರಬೇತಿ ಕ್ಷೇತ್ರದಲ್ಲಿ ಭಾರತ ವಾಹನ ತರಬೇತಿ ಶಾಲೆಯು ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ರಾಜ್ಯದ ಎಲ್ಲ ವಾಹನ ತರಬೇತಿ ಶಾಲೆಗಳ ಮಾಲೀಕರಿಗೆ ಈ ಸಂಸ್ಥೆಯು ಪ್ರೇರಣೆ ಮತ್ತು ಮಾದರಿಯಾಗಿದೆ. ಸಂಸ್ಥೆಯ ಮಾರ್ಗದರ್ಶನದಲ್ಲಿ ಚಾಲಕರಿಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಶಿಸ್ತು ಮತ್ತು ಜವಾಬ್ದಾರಿಯುತ ಚಾಲನಾ ಗುಣಗಳನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು. 


ಸುದ್ದಿ ಓದಿ