ಬೆಳಗಾವಿ

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಬಲಪಡಿಸಿ ಹೋರಾಟಕ್ಕೆ ಸಿದ್ಧರಾಗಿ: ಜಿ.ಎಂ. ಬಡಿಗೇರ್

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಬಲಪಡಿಸಿ ಹೋರಾಟಕ್ಕೆ ಸಿದ್ಧರಾಗಿ: ಜಿ.ಎಂ. ಬಡಿಗೇರ್
Strengthen the organization and prepare for the struggle to get the demands of aided primary school

ಲೋಕದರ್ಶನ ವರದಿ 

            ಹಾರೂಗೇರಿ 10 : ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿ ಶಾಲೆ, ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿ, ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಸಿದ್ಧರಾಗಬೇಕು. ಸಂಘಟನೆ ಗಟ್ಟಿಯಾದರೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಎಮ್‌.ಬಡಿಗೇರ ಹೇಳಿದರು. 

            ಪಟ್ಟಣದ ಏಕಲವ್ಯ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

              ಸರ್ಕಾರ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಿಂಚಣಿಗೆ ಒಳಪಡಿಸಿ, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಕಳೆದ 30 ವರ್ಷಗಳಿಂದ ಅನುದಾನಿತ ಶಾಲೆಗಳಲ್ಲಿನ ನಿವೃತ್ತಿ ಮತ್ತು ಮರಣದಿಂದ ತೆರವಾದ ಹುದ್ದೆಗಳ ಭರ್ತಿಗೆ ಅನುಮತಿ ನೀಡಬೇಕು. ಅಲ್ಲಿವರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಡಬೇಕು. ಶಿಕ್ಷಕರ ಕೊರತೆ ಹಾಗೂ ನಾನಾ ಸಮಸ್ಯೆಗಳಿಂದ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಹೇಳಿದರು. 

           ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ವಾಯ್‌.ಬಿ.ಹಂಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅನುದಾನಿತ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು, ಶಿಕ್ಷಕರು ಆಡಳಿತ ಮಂಡಳಿತ ವಿಶ್ವಾಸ ಗಳಿಸಿ, ಸಂಘಟಿತರಾಗಿ ರಾಜ್ಯಮಟ್ಟದಲ್ಲಿ ಧ್ವನಿಯೆತ್ತಬೇಕಿದೆ.. ಪ್ರತಿಯೊಬ್ಬ ಶಿಕ್ಷಕರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಹೇಳಿದರು. 

           ಈವೇಳೆ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಉಪಾಧ್ಯಕ್ಷರಾಗಿ ಅನೀಲಕುಮಾರ ಖಾಮಗೌಡರ, ಕರೆಪ್ಪ ಹುಲಿಮನಿ, ಸಂಜೀವ ಕಾಂಬಳೆ, ಆರ್‌.ಬಿ.ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಆರ್‌.ಎಸ್‌.ಮಾಳಗೆ, ತಾಲೂಕು ಖಜಾಂಚಿ ಚನ್ನವೀರಯ್ಯ ಹೀರೇಮಠ, ಸಹಕಾರ್ಯದರ್ಶಿಗಳಾಗಿ ಗೀರೀಶ ತಳವಾರ, ದುಂಡಪ್ಪ ಸನದಿ, ರಾಜಶ್ರೀ ಹುಣಸಿಕಟ್ಟಿ, ಭೀರ​‍್ಪ ತಡಸಲೂರ, ಸಂಘಟನಾ ಕಾರ್ಯದರ್ಶಿಗಳಾಗಿ ಗೋಪಾಲ ವಡ್ಡರ, ಮಹೇಶ ಗೊಜಗೋಜಿ, ಜ್ಞಾನೇಶ್ವರ ಹಾಡಕಾರ, ಅರವಿಂದ ಚಿಕಲೆ ಅವರು ಅಧಿಕಾರಿ ವಹಿಸಿಕೊಂಡರು. 

           ಅಥಣಿ ತಾಲೂಕಾಧ್ಯಕ್ಷ ಈರಗೌಡ ಪಾಟೀಲ, ಕಾರ್ಯದರ್ಶಿ ಭರತೇಶ ಪಾಟೀಲ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಕಾಂತ ಯಳ್ಳೂರ, ಮಹಿಳಾ ಉಪಾಧ್ಯಕ್ಷೆ ರೇಣುಕಾ ಕೊಪ್ಪ, ಹುಕ್ಕೇರಿ ತಾಲೂಕು ಉಪಾಧ್ಯಕ್ಷ ಹೊಳೆಪ್ಪಗೋಳ, ಬಿ.ಐ.ಬಾಡಗಿ, ಬಿ.ಎಲ್‌.ಗದಗಿ ಹಾಗೂ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಮೇಶ ಮಾಳಗೆ ಸ್ವಾಗತಿಸಿದರು. ಗೀರೀಶ ತಳವಾರ ಕಾರ್ಯಕ್ರಮ ನಿರೂಪಿಸಿದರು. ಚನ್ನವೀರಯ್ಯ ಹಿರೇಮಠ ವಂದಿಸಿದರು. 


ಸುದ್ದಿ ಓದಿ