ಬೆಳಗಾವಿ

ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ 1.64 ಕೆ.ಜಿ. ತೂಕದ ಬೃಹತ್ ಗರ್ಭಾಶಯದ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ತೆರವು

ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ 1.64 ಕೆ.ಜಿ. ತೂಕದ ಬೃಹತ್ ಗರ್ಭಾಶಯದ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ತೆರವು

ಲೋಕದರ್ಶನ ವರದಿ 

ಬೆಳಗಾವಿ10:  ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 41 ವರ್ಷದ ಮಹಿಳೆಯ ಗರ್ಭಾಶಯದಲ್ಲಿದ್ದ ಸುಮಾರು 1.64 ಕೆ.ಜಿ. ತೂಕದ ಬೃಹತ್ ಗಡ್ಡೆಯನ್ನು ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೆಗೆದುಹಾಕಲಾಗಿದೆ. 

ರೋಗಿಯು ಬಹಳ ದಿನಗಳಿಂದ ಹೊಟ್ಟೆಯ ಭಾಗದಲ್ಲಿ ಬೆಳೆಯುತ್ತಿದ್ದ ಬೃಹತ್ ಗಡ್ಡೆಯಿಂದಾಗಿ ತೀವ್ರ ನೋವು ಹಾಗೂ ದೈಹಿಕ ತೊಂದರೆಗಳಿಂದ ಬಳಲುತ್ತಿದ್ದರು. ದೀರ್ಘಕಾಲದಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯಕೀಯ ತಂಡವು ಅಗತ್ಯ ಪರೀಕ್ಷೆಗಳನ್ನು ನಡೆಸಿ, ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. 

ಈ ಸಂದರ್ಭದಲ್ಲಿ ರೋಗಿಯು ಅಪಾರ ಧೈರ್ಯ, ತಾಳ್ಮೆ ಹಾಗೂ ಸಹಕಾರವನ್ನು ತೋರಿದರು. ವೈದ್ಯಕೀಯ ತಂಡದ ಮೇಲಿನ ಅವರ ವಿಶ್ವಾಸ ಮತ್ತು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಅವರು ನೀಡಿದ ಸಹಕಾರವು ಗಮನಾರ್ಹವಾಗಿತ್ತು.ಗರ್ಭಾಶಯದಲ್ಲಿ ಬೆಳೆಯುವ ಇಂತಹ ಗಡ್ಡೆಗಳನ್ನು ವೈದ್ಯಕೀಯ ಭಾಷೆಯಲ್ಲಿ ಫೈಬ್ರಾಯ್ಡ್‌ ಎಂದು ಕರೆಯಲಾಗುತ್ತದೆ.

ಗಡ್ಡೆಗಳು ದೊಡ್ಡದಾದಾಗ ಹೊಟ್ಟೆ ನೋವು, ಅತಿಯಾದ ಮುಟ್ಟಿನ ರಕ್ತಸ್ರಾವ, ಹೊಟ್ಟೆಯಲ್ಲಿ ಭಾರವಾದ ಅನುಭವ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಗಡ್ಡೆಯ ಗಾತ್ರ, ರೋಗಿಯ ಲಕ್ಷಣಗಳು ಮತ್ತು ಒಟ್ಟಾರೆ ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. 


ಸುದ್ದಿ ಓದಿ