ಬೆಳಗಾವಿ

ಶಿಂದಿಕುರಬೇಟ : ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ

ಶಿಂದಿಕುರಬೇಟ : ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ

ಲೋಕದರ್ಶನ ವರದಿ 


ಘಟಪ್ರಭಾ 10:  ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ದಿ.11ರಿಂದ 20ರವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ. ದಿ.11ರಂದು ಬೆಳಿಗ್ಗೆ ಶ್ರೀ ದುರ್ಗಾಮಾತಾ ದೌಡ ಪಥ ಸಂಚಲನಕ್ಕೆ ಚಾಲನೆ, ಸಂಜೆ ಆರು ಗಂಟೆಗೆ ದೇವಸ್ಥಾನದಲ್ಲಿ ಘಟಸ್ಥಾಪನೆ ಕಾರ್ಯಕ್ರಮ, ಸಾಯಂಕಾಲ ಏಳು ಗಂಟೆಗೆ ಶರನ್ನವರಾತ್ರಿ ಉತ್ಸವ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯ ಬಬಲಾದಿಮಠದ ಶ್ರೀ ಗುರು ಚಕ್ರವರ್ತಿ ಶಿವಯ್ಯ ಮಹಾಸ್ವಾಮಿಜಿ, ಸಾನಿಧ್ಯ ವಡೇರಹಟ್ಟಿಯ ಶ್ರೀ ಅಂಬಾದರ್ಶನ ಪೀಠದ ಪೀಠಾಧ್ಯಕ್ಷ ಶ್ರೀ ನಾರಾಯಣ ಶರಣರು, ದೇಸಾಯಿ ಮನೆತನದ ತ್ರಿಶೀಲಾದೇವಿ ರಾಮಪ್ರೀಯ ಪಾಟೀಲ ದೇಸಾಯಿ ಅವರು ಉದ್ಘಾಟಿಸುವರು. ನೇತ್ರತ್ವವನ್ನು ಜ್ಯೋತಿಭಾ ಸಾಳೊಂಕೆ,  ಅಧ್ಯಕ್ಷತೆ ಮಾರುತಿ ಜಾಧವ, ಮುಖ್ಯ ಅತಿಥಿಗಳಾಗಿ ದೇವಋಷಿಗಳಾದ ಬಸಪ್ಪ ಕಬ್ಬೂರ, ಮುರೇಪ್ಪ ಪೂಜೇರಿ, ಶಾಹನವಾಜ ಮಕಾನದಾರ, ಅರ್ಚಕರಾದ ಮಲ್ಲಿಕಾರ್ಜುನ ವಸ್ತ್ರದ, ಅಜೀತ ಬಡಿಗೇರ, ಗ್ರಾ.ಪಂ. ಮಾಜಿ ಅಧ್ಯಕ್ಷೆ ರೂಪಾ ಕಂಬಾರ, ಮರಾಠಾ ಸಮಾಜದ ಅಧ್ಯಕ್ಷ ನಾರಾಯಣ ಜಗದಾಳೆ ಉಪಸ್ಥಿತರುವರು. ಪ್ರತಿದಿನ ಶ್ರೀ ದೇವಿಯ ವಿಶೇಷ ಮಹಾಪೂಜೆ, ಬನ್ನಿ ಮಹಾಕಾಳಿ ವೃಕ್ಷ ಪೂಜೆ, ಭಕ್ತಿ ಸಂಗೀತ ಕಾರ್ಯಕ್ರಮ, ಶ್ರೀ ದೇವಿ ಆರಾಧಕರಿಂದ ಶ್ರೀದೇವಿ ಮಹಾತ್ಮೆ ಮಹಾಗ್ರಂಥ ಸಾಮೂಹಿಕ ಪಾರಾಯಣ,ಶ್ರೀ ದೇವಿ ಉತ್ಸವ ಮೂರ್ತಿಗೆ ತುಲಾಭಾರ ಸೇವೆ ಹಾಗೂ ವಿವಿಧ ಸೇವೆ ಸಲ್ಲಿಸಿದ ಸದ್ಭಕ್ತರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ಶ್ರೀ ಅಂಬಾಭವಾನಿ ದೇವಸ್ಥಾನ ಸೇವಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ