ಬೆಳಗಾವಿ

ಸುಂದರ್ ಮ್ಯಾಗಡಿ ರಾಜ್ಯಾಧ್ಯಕ್ಷರಾಗಿ ಆಯ್ಕೆ

ಸುಂದರ್ ಮ್ಯಾಗಡಿ ರಾಜ್ಯಾಧ್ಯಕ್ಷರಾಗಿ ಆಯ್ಕೆ


ಪಾಲಬಾವಿ 09 : ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು, ಕರ್ನಾಟಕ ರಾಜ್ಯ ವಾರ್ಡನಗಳ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ರಾಜ್ಯ ವಾರ್ಡನಗಳ ಕ್ಷೆಮಾಭಿವೃದ್ಧಿ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಸುಂದರ ಮ್ಯಾಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ನೌಕರರ ಭವನದಲ್ಲಿ (ಅ.08) ರಂದು ಜರುಗಿದ ಕರ್ನಾಟಕ ರಾಜ್ಯ ವಾರ್ಡನ್ ಗಳ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ವಾರ್ಡನ್ ಗಳ ಒಮ್ಮತದಿಂದ ಸುಂದರ ಮ್ಯಾಗಡಿ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಹಿಳಾ ರಾಜ್ಯ ಅಧ್ಯಕ್ಷರಾಗಿ ಸುಧಾ ಲಿಂಗನಂದನ್ನವರ(ದಾವಣಗೆರೆ) ಆಯ್ಕೆಯಾಗಿದ್ದು.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ರೆಡ್ಡಿ (ತುಮಕೂರ) ಪ್ರಧಾನ ಖಜಾಂಚಿಯಾಗಿ ರಮೇಶ ಪಿಡಿ, (ಬೆಂಗಳೂರು ನಗರ) ರಾಜ್ಯ ಕಾರ್ಯಧ್ಯಕ್ಷರಾಗಿ ಕೊಟ್ರೇಶ (ಶಿವಮೊಗ್ಗ)ರಾಜ್ಯ ಉಪಾಧ್ಯಕ್ಷರಾಗಿ ಗೌತಮ್ಮ (ಬೀದರ) ವಿದ್ಯಾಧರ ಕಾಂಬಳೆ (ಕಲಬುರಗಿ) ಸಂತೋಷ ಎಚ್‌.ಬಿ (ಹಾಸನ) ಶ್ರೀನಿವಾಸ.ಪಿ (ಮಂಡ್ಯ) ನಂಜುಂಡಸ್ವಾಮಿ (ಬೆಂಗಳೂರು) ಸತೀಶ್ ಅರಸೀಕೆರೆ (ಹಾಸನ) ಮಹಿಳಾ ರಾಜ್ಯ ಉಪಾಧ್ಯಕ್ಷರಾಗಿ ಆಶಾ ಕಾಂಬಳೆ (ಬೆಳಗಾವಿ) ಕಲಬುರ್ಗಿ ವಿಭಾಗದ ಅಧ್ಯಕ್ಷರಾಗಿ ದೇವೇಂದ್ರ ರುದ್ರವಾರ (ಯಾದಗಿರಿ) ಬೆಳಗಾವಿ ವಿಭಾಗದ ಅಧ್ಯಕ್ಷರಾಗಿ ಕೆ.ಬಿ.ಕೋರೆ (ವಿಜಯಪುರ) ಮೈಸೂರು ವಿಭಾಗದ ಅಧ್ಯಕ್ಷರಾಗಿ ಶಿವಮಲ್ಲಯ್ಯ. ಡಿ (ಮೈಸೂರ) ಬೆಂಗಳೂರು ವಿಭಾಗದ ಅಧ್ಯಕ್ಷರಾಗಿ ನಂಜುಂಡಯ್ಯ (ಬೆಂಗಳೂರು ಗ್ರಾಮಾಂತರ) ಆಯ್ಕೆಯಾಗಿದ್ದಾರೆಂದು ಸಂಘಟನೆಯ ಮುಖ್ಯಸ್ಥರಾದ ರಮೇಶ ಪಿ.ಡಿ ಹಾಗೂ ಸುಧಾ ಲಿಂಗನಂದನ್ನವರ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ