ಬೆಳಗಾವಿ

ತುಕ್ಕಾನಟ್ಟಿಯಲ್ಲಿ ನ್ಯಾನೋ ಗೊಬ್ಬರಗಳ ಮಹತ್ವ ಮತ್ತು ಬಳಕೆ ಕುರಿತು ಮಾಹಿತಿ ಕಾರ್ಯಕ್ರಮ

ತುಕ್ಕಾನಟ್ಟಿಯಲ್ಲಿ ನ್ಯಾನೋ ಗೊಬ್ಬರಗಳ ಮಹತ್ವ ಮತ್ತು ಬಳಕೆ ಕುರಿತು ಮಾಹಿತಿ ಕಾರ್ಯಕ್ರಮ

ಲೋಕದರ್ಶನ ವರದಿ  



ಮೂಡಲಗಿ 11:  ತಾಲೂಕಿನ ಕೆ ವಿ ಕೆ ಬರ್ಡ್ಸ್‌ ತುಕಾನಟ್ಟಿಯಲ್ಲಿ ಕೊರೊಮಂಡಲ ಇಂಟರ್ನ್ಯಾಷನಲ್ ಲಿಮಿಟೆಡ್ ಹಾಗೂ ಕೆವಿಕೆ ತುಕಾನಟ್ಟಿ ಸಂಯುಕ್ತಾಶ್ರಯದಲ್ಲಿ ನ್ಯಾನೋ ಗೊಬ್ಬರಗಳ ವೈಶಿಷ್ಟ್ಯತೆ ಹಾಗೂ ವಿಚಾರವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಕೊರೊಮಂಡಲ ಕಂಪನಿಯ ಶ್ರೀ ಪ್ರಶಾಂತ್ ನ್ಯಾನೋ ಗೊಬ್ಬರಗಳ ವೈಜ್ಞಾನಿಕ ಮಾಹಿತಿ ಹಾಗೂ ಅದರ ಬಳಕೆ ಮಾಡುವ ಕ್ರಮಗಳ ಬಗ್ಗೆ ತಿಳಿಸಿದರು. 

ಕೆವಿಕೆ ವಿಜ್ಞಾನಿಗಳಾದ ಡಾ. ಮಾರುತಿ ಮಾಳವಾಡಿ ಇವರು ನ್ಯಾನೋ ಗೊಬ್ಬರಗಳಿಂದಾಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು, ಗೋಕಾಕ್ ಸಹಾಯಕ ಕೃಷಿ ನಿರ್ದೇಶಕರಾದ ನದಾಫ್  ಕೃಷಿಯಲ್ಲಿ ಹೊಸ ತಾಂತ್ರಿಕತೆ ಬಳಸಿ ಎಂದು ರೈತರಿಗೆ ಹೇಳಿದರು  

ಕಾರ್ಯದಲ್ಲಿ ಅಧ್ಯಕ್ಷರಾದ ಶ್ರೀ ಆರ್ ಎಂ ಪಾಟೀಲ ಚೇರಮನ್ ಕೆವಿಕೆ ತುಕಾನಟ್ಟಿ, ಬಸವರಾಜ ಕೋರಮಂಡ ಕಂಪನಿಯ ಮ್ಯಾನೇಜರ್, ತುಕಾನಟ್ಟಿ, ನಾಗನೂರ, ದುರದುಂಡಿಯ ರೈತರು ಹಾಗೂ  ಕಂಪನಿಯ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ