ಲಕ್ಷೇಶ್ವರ ತಾಲೂಕ ಘಟಕದ ನೂತನ ಅಧ್ಯಕ್ಷರ ನಿಯಮ ಬಾಹಿರ ಆಯ್ಕೆ
ಲಕ್ಷ್ಮೇಶ್ವರ 11 : ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷ್ಮೀಶರ ತಾಲೂಕು ಘಟಕದ ನೂತನ ಅಧ್ಯಕ್ಷರ ನಿಯಮ ಬಾಹಿರ ಆಯ್ಕೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಶಂಕರ .ಆರ್. ಬಿಸರಳ್ಳಿರವರ ಆದೇಶದ ಒಂದನ್ನು ಬಿಡುಗಡೆ ಮಾಡಿದ್ದಾರೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ,(ರಿ) ಬೆಂಗಳೂರು, ಆಡಳಿತ ಕಚೇರಿ ಹರಿಹರ ಮತ್ತು ಬೆಂಗಳೂರು ಇದರ ಅಡಿಯಲ್ಲಿ ರಾಜ್ಯ ಸಂಘದ ಬೈಲಾ ನಿಯಮಗಳ ಅನ್ವಯ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷೇಶ್ವರ ತಾಲೂಕ ಘಟಕವು ತಾಲೂಕ ಅಧ್ಯಕ್ಷರಾದ ಮಂಜುನಾಥ ಏ ಮಾಗಡಿ ಇವರ ಅಧ್ಯಕ್ಷತೆಯಲ್ಲಿ ಸಮಾಜದ ಸಂಘಟನೆಯ ಕಾರ್ಯವು ಅತ್ಯಂತ ಪರಿ ಣಾಮಕಾರಿಯಾಗಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೈಲಾ ನಿಯಮಗಳ ಅನ್ವಯ ತಾಲೂಕ ಘಟಕಗಳ, ಜಿಲ್ಲಾ ಘಟಕಗಳ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಅವಧಿಯು ಇನ್ನೂ ಮುಗಿದಿರುವುದಿಲ್ಲ.