ಗದಗ

ನಿರ್ಲಕ್ಷ್ಯಕ್ಕೆ ಒಳಗಾದ ಆದಿಕವಿ ಸಾರ್ವಜನಿಕ ಗ್ರಂಥಾಲಯ; ಹೊಸ ಕಾಯಕಲ್ಪ ಯಾವಾಗ?

ನಿರ್ಲಕ್ಷ್ಯಕ್ಕೆ ಒಳಗಾದ ಆದಿಕವಿ ಸಾರ್ವಜನಿಕ ಗ್ರಂಥಾಲಯ; ಹೊಸ ಕಾಯಕಲ್ಪ ಯಾವಾಗ?


ಲಕ್ಷ್ಮೇಶ್ವರ 11: ತಾಲೂಕು ಕೇಂದ್ರವಾಗಿರುವ ಪಟ್ಟಣದ ಮಧ್ಯಭಾಗದಲ್ಲಿರುವ ಆದಿಕವಿ ಸಾರ್ವಜನಿಕರ ಗ್ರಂಥಾಲಯಕ್ಕೆ ಬೇಕಿದೆ ಹೊಸ ಕಾಯಕಲ್ಪ ಈ ಗ್ರಂಥಾಲಯವು ಹಲವಾರು ಇತಿಹಾಸಗಳನ್ನು ಹೊಂದಿದೆ ಆದರೆ ಇದಕ್ಕೆ ಹೊಸ ಕಾಯಕಲ್ಪಕ್ಕೆ ಮಾತ್ರ ಇನ್ನು ಮುಹೂರ್ತ ಬಂದಿಲ್ಲ ಎಂಬಂತೆ ಕಾಣುತ್ತಿದೆ ಗ್ರಂಥಾಲಯಕ್ಕೆ ಹಚ್ಚಿದ ಬಣ್ಣ ಎಲ್ಲಾ ಉದರಿ ಹೋಗಿ ವಿಕಾರವಾಗಿ ಕಾಣುತ್ತಿದೆ ಮುಂದಿನ ಕಾಂಪೌಂಡ್ ಪಡೆದೆಗಳು ಸಂಪೂರ್ಣವಾಗಿ ಕಿತ್ತುಕೊಂಡು ಹೋಗಿವೆ.

ಸರಿಯಾದ ಗೇಟ್ ವ್ಯವಸ್ಥೆ ಇಲ್ಲಾ ಕಾಂಪೌಂಡ್ ಪಕ್ಕದಲ್ಲಿ ಗಿಡಗಂಟೆಗಳು ಬೆಳದಿವೆ ಇದರಿಂದ ಗ್ರಂಥಾಲಯದ ಅಂದವೇ ಹೋಗಿದೆ ಪ್ರತಿ ದಿನ ಬೆಳಗಾಯಿತಂದರೆ ಸಾಕು ಹೊಸ ಹೊಸ ಸುದ್ದಿ ವಿಚಾರಗಳನ್ನು ತಿಳಿದುಕೊಳ್ಳಲು ಗ್ರಂಥಾಲಯಕ್ಕೆ ಬರುವ ಪತ್ರಿಕೆಗಳನ್ನು ಓದಲು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳು ಸಾಹಿತಿಗಳು ಸೇರಿದಂತೆ ನೂರಾರು ಜನರು ಬರುತ್ತಾರೆ,  ಗ್ರಂಥಾಲಯದ ಒಳಗಡೆ ಮಾತ್ರ ಎಲ್ಲಾ ಪುಸ್ತಕಗಳು ಪತ್ರಿಕೆಗಳು ಇರುತ್ತವೆ.  


ಸುದ್ದಿ ಓದಿ