ಅಡವೀಂದ್ರಸ್ವಾಮಿ ಮಠದಲ್ಲಿ ಪುರಾಣ ಪ್ರಾರಂಭೋತ್ಸವ ಇಂದಿನಿಂದ
ಲೋಕದರ್ಶನ ವರದಿ
ಗದಗ 11 : ನಗರದ ಅಡವೀಂದ್ರಸ್ವಾಮಿ ಮಠದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ಘಟಸ್ಥಾಪನೆ ಹಾಗೂ 46ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವ ಅ.11 ರಂದು ಸಂಜೆ 6.30ಕ್ಕೆ ಜರುಗಲಿದೆ.
ಅ.11 ರಂದು ಬೆಳಿಗ್ಗೆ 9ಕ್ಕೆ ಹಿರೇವಡ್ಡಟ್ಟಿಯ ಶ್ರೀವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯ, ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ, ಪೂಜಾ ಸಮಿತಿ ಅಧ್ಯಕ್ಷ ಶರಣಯ್ಯ ಶಾಸ್ತ್ರಿಗಳು ಶಿವಪ್ಪಯ್ಯನಮಠ ಅವರ ಸಮ್ಮುಖದಲ್ಲಿ ಧರ್ಮ ಧ್ವಜಾರೋಹಣವನ್ನು ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ ನೆರವೇರಿಸುವರು.
ಸಂಜೆ 6.30ಕ್ಕೆ ಗದಗ ಶಿವಾನಂದ ಬ್ರಹನ್ಮಠದ ಜಗದ್ಗುರು ಶ್ರೀಸದಾಶಿವಾನಂದ ಮಹಾಸ್ವಾಮಿಗಳ ಸಾನ್ನಿಧ್ಯ, ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವ ಜರುಗಲಿದೆ. ಅ.11 ರಿಂದ 21ರವರೆಗೆ ಶ್ರೀದೇವಿ ಪುರಾಣ ಪ್ರವಚನ ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಜರುಗಲಿದೆ.
ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸುವರು. 2026ನೇ ಸಾಲಿನ ದಸರಾ ಮಹೋತ್ಸವ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವನ್ನು ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹ ಪ್ರಾಧ್ಯಾಪಕರು ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಡಾ.ರುದ್ರಮ್ಮ ಜೆ. ಅವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಮ್ಸ್ ಪ್ರಾಧ್ಯಾಪಕರಾದ ಡಾ.ಮಹಾಂತೇಶ ಪಾಟೀಲ ಹಾಗೂ ಡಾ.ರೂಪಾ ಪಾಟೀಲ ಪಾಲ್ಗೊಳ್ಳುವರು.
ಜಾತ್ರಾಮಹೋತ್ಸವ ಸಮಿತಿ ಗೌರವಧ್ಯಕ್ಷ ಸದಾಶಿವಯ್ಯ ಮದರಿಮಠ, ಸುವರ್ಣಾ ಮದರಿಮಠ, ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ, ಕಾರ್ಯದರ್ಶಿ ಶಿವಪ್ರಭು ನೀಲಗುಂದ, ಕೋಶಾಧ್ಯಕ್ಷ ಪ್ರಭುಗೌಡ ಪಾಟೀಲ ಹಾಗೂ ಮಹಿಳಾ ಅಧ್ಯಕ್ಷರಾದ ಶಿವಲೀಲಾ ಅಕ್ಕಿ, ಕಾರ್ಯದರ್ಶಿ ಅಶ್ವಿನಿ ನೀಲಗುಂದ, ಪ್ರಕಾಶ ಅಕ್ಕಿ, ಬಸವರಾಜ ಬ್ಯಾಹಟ್ಟಿ, ಡಾ, ರಾಜೇಂದ್ರ ಗಡಾದ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿರುವರು.