ಗದಗ

ಅ. 12 ರಿಂದ ಬಳಗಾನೂರಿನಲ್ಲಿ “ನನ್ನ ಭಾರತಕ್ಕಾಗಿ ಯುವಜನತೆ” ವಿಶೇಷ ಶಿಬಿರ

ಅ. 12 ರಿಂದ  ಬಳಗಾನೂರಿನಲ್ಲಿ “ನನ್ನ ಭಾರತಕ್ಕಾಗಿ ಯುವಜನತೆ” ವಿಶೇಷ ಶಿಬಿರ

ಲೋಕದರ್ಶನ ವರದಿ 

ಗದಗ 10 :  ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಲ್ಲಿ ಅಡಿಯಲ್ಲಿ  ಇದೇ ಅಕ್ಟೋಬರ್ 12 ರಿಂದ 18ರ ವರೆಗೆ  ನಶೆ ಮುಕ್ತ ಕ್ಷಯರೋಗ(ಟಿಬಿ)ಮುಕ್ತ ಯುವ ಜನತೆ “ನನ್ನ ಭಾರತಕ್ಕಾಗಿ ಯುವಜನತೆ” ಎನ್‌ಎಸ್‌ಎಸ್ ವಿಶೇಷ ಶಿಬಿರ ಆಯೋಜಿಸಲಾಗಿದೆ. ಅ. 12 ರಂದು ಸಂಜೆ 4 ಗಂಟೆಗೆ  ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯಶ್ರೀ ಚನ್ನವೀರ ಶರಣರ ದಿವ್ಯ ಪ್ರಕಾಶದಡಿಯಲ್ಲಿ ಕಾರ್ಯಕ್ರಮ ಆರಂಭವಾಗುವುದು.  

ಈ ಶಿಬಿರದಲ್ಲಿ  ವಿವಿಧ ತಜ್ಞವೈದ್ಯರು ಭೇಟಿ ನೀಡಲಿದ್ದಾರೆ. ರಾಯಚೂರಿನ ಕಣ್ವ ಆಸ್ಪತ್ರೆಯ ಬಸವನಗೌಡ ಪಾಟೀಲ್ ಅವರು ಉಚಿತವಾಗಿ ಓಷಧಿ ವಿತರಿಸಲಿದ್ದಾರೆ. ಪ್ರತಿದಿನ ಸಂಜೆ 6 ಗಂಟೆಗೆ  ವಿವಿಧ ವಿಷಯನ್ನೊಳಗೊಂಡ ಉಪನ್ಯಾಸ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ವಿವಿಧ ಕಾಲೇಜುಗಳ ಉಪನ್ಯಾಸಕರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ.  

ಅಕ್ಟೋಬರ್ 13 ರಂದು ಬೆಳಿಗ್ಗೆ 10.30 ಗಂಟೆಗೆ ಬರಡು ದನಗಳಿಗೆ ಉಚಿತ ಚಿಕಿತ್ಸೆ ಹಾಗೂ ನಾಯಿ,ಬೆಕ್ಕುಗಳಿಗೆ ರೇಬಿಸ್ ರೋಗ ತಡೆಗಟ್ಟುವ ಲಸಿಕೆ  ಮತ್ತು ಮಾಹಿತಿ ನೀಡಲಾಗುವುದು. ಸಂಜೆ 6 ಗಂಟೆಗೆ ರಾಷ್ಟ್ರದ ಅಭಿವೃದ್ದಿಯಲ್ಲಿ ಗ್ರಾಮೀಣ ಯುವಕರ ಪಾತ್ರ ಕುರಿತು ಕಾರ್ಯಕ್ರಮ ಜರಗುವುದು. 


ಸುದ್ದಿ ಓದಿ