ಶಿಗ್ಗಾವ್

ಮಲ್ಲಿಕಾರ್ಜುನ ಮಠದರಿಗೆ ಗೌರವ ಸನ್ಮಾನ

ಮಲ್ಲಿಕಾರ್ಜುನ ಮಠದರಿಗೆ ಗೌರವ ಸನ್ಮಾನ



ಶಿಗ್ಗಾವಿ 11 : ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರವಹಿಸಿ ಕೊಂಡಿರುವ ಮಲ್ಲಿಕಾರ್ಜುನ ಮಠದ ಅವರಿಗೆ ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ, ತಾಲೂಕು ನೌಕರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಚ್ ಡಿ ಕುಂಕುರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರ, ನೌಕರ ಸಂಘದ ನಾಮನಿರ್ದೇಶನ ಸದಸ್ಯರಾದ ಮಲ್ಲೇಶ್ ಕರೆಕಣ್ಣಮ್ಮನವರ್, ಶ್ರೀಕಾಂತ್ ಸಂಕನಗೌಡ್ರ ಉಪಸ್ಥಿತರಿದ್ದರು. 


ಸುದ್ದಿ ಓದಿ