ಶಿಗ್ಗಾವ್

ವೀರಶೈವ ಲಿಂಗಾಯತ ಮಠಾಧೀಶರ ಬಗ್ಗೆ ಸಿಎಂ ಹೇಳಿಕೆ ನೈಜ ಗುಣ ಹೊರಹಾಕಿದೆ: ಬೊಮ್ಮಾಯಿ

ವೀರಶೈವ ಲಿಂಗಾಯತ ಮಠಾಧೀಶರ ಬಗ್ಗೆ ಸಿಎಂ ಹೇಳಿಕೆ ನೈಜ ಗುಣ ಹೊರಹಾಕಿದೆ: ಬೊಮ್ಮಾಯಿ


ಶಿಗ್ಗಾವಿ, ಅ.7: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಶೈವ ಲಿಂಗಾಯತ ಮಠಾಧೀಶರ ಕುರಿತು ನೀಡಿರುವ ಹೇಳಿಕೆ ಅವರ ನೈಜ ಗುಣವನ್ನು ಹೊರಹಾಕಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಮಠಾಧೀಶರು ನನ್ನ ಸೇವೆ ಮಾಡಬೇಕು’ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.  

ಮುಖ್ಯಮಂತ್ರಿಯವರು ತಮ್ಮ ನೈಜ ಗುಣವನ್ನು ಇಷ್ಟು ದಿನ ಒಳಗಡೆ ಮುಚ್ಚಿಟ್ಟುಕೊಂಡಿದ್ದರು. ಇದೀಗ ಅದು ಹೊರಬಂದಿದೆ. ಇದು ಅವರ ಸಂಸ್ಕೃತಿ ಹಾಗೂ ಮನೋಭಾವವನ್ನು ತೋರಿಸುತ್ತದೆ. ಅವರು ಹೇಳಿರುವುದು ಸ್ಪಷ್ಟವಾಗಿ ಬಹಿರಂಗವಾಗಿದೆ. ಇದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಜನರು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. 


ಸುದ್ದಿ ಓದಿ