ಕರಿಯಮ್ಮ ದೇವಿ ಮಹಿಳಾ ಮಂಡಳದ ವತಿಯಿಂದ ವಾಸಣ್ಣ ಕುರಡಗಿ ಅವರಿಗೆ ಸನ್ಮಾನ
ಗದಗ 07: ಕಾಂಗ್ರೆಸ್ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಾಸಣ್ಣ ಕುರಡಗಿ ಅವರನ್ನು ನಗರದ ಶ್ರೀ ಕರಿಯಮ್ಮದೇವಿ ಮಹಿಳಾ ಮಂಡಳದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಕೇಸರಿ, ಅನಿತಾ ಜಕಬಾಳ, ಶಶಿಕಲಾ ಗುರಿಕಾರ, ಪಾರ್ವತಿ ಮುದ್ಲಾಪುರ, ಅಕ್ಕಮಹಾದೇವಿ ಕಳ್ಳಿ, ಶಾಂತಾ ಹೊನಕೇರಿ, ಜಯಲಕ್ಷ್ಮಿ ಡೊಳ್ಳಿನವರ, ಗಂಗಾ ಚಕ್ರನ್ನವರ, ಮಂಜುಳಾ ಹೊಸಳ್ಳಿ, ಶಾಂತಾ ಗೌಡರ, ಗಂಗವ್ವ ನರ್ತಿ, ಡಾ. ಸಿದ್ದಣ್ಣ ಜಕಬಾಳ, ರಾಮಪ್ಪ ಕಾಶಪ್ಪನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.