ಎಚ್ ಕೆ ಪಾಟೀಲ್ ಸೇವಾ ತಂಡದ ತ್ರೈ ಮಾಸಿಕ ಸಭೆ
ಲೋಕದರ್ಶನ ವರದಿ
ಗದಗ 07:- ಸಮಸ್ತ ನಾಗರಿಕರ ಆರೋಗ್ಯ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸಬಲೀಕರಣದ ಮೂಲಧ್ಯೇಯವನ್ನು ಹೊಂದಿರುವ ಎಚ್ ಕೆ ಪಾಟೀಲ್ ಸೇವಾ ತಂಡವು ಕಳೆದ ಹಲವಾರು ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಪಾರ ಜನಸ್ಪಂಧನೆಗೆ ಪಾತ್ರವಾಗಿರುತ್ತದೆ.
ಆ ಪ್ರಯುಕ್ತ ಇದೇ ದಿನಾಂಕ ಅಕ್ಟೊಬರ್ 7 ರಂದು ಸೇವಾ ತಂಡದ ಕಚೇರಿಯಲ್ಲಿ ತ್ರೈ ಮಾಸಿಕ ಪೂರ್ವ ಯೋಜನೆಗಳ ಅನುಷ್ಠಾನಕ್ಕಾಗಿ ಸೇವಾ ತಂಡದ ಅಧ್ಯಕ್ಷರಾದ ಸನ್ಮಾನ್ಯ ಪ್ರಭು ಎಲ್ ಬುರಬುರೆರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಅವಳಿ ನಗರದಲ್ಲಿನ ಶುದ್ಧ ನೀರಿನ ಘಟಕಗಳ ನಿರ್ವಹಣೆಯ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಅದರಂತೆ ಸೇವಾ ತಂಡದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕರಿಗೆ ಗೌರವಧನ ನಿಗದಿ ಪಡಿಸುವ ಕುರಿತು ಅಗತ್ಯವಿರುವಲ್ಲಿ ಹೆಚ್ಚಿನ ಸ್ವಯಂ ಸೇವಕರನ್ನು ನೇಮಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಈ ಸಂಧರ್ಭದಲ್ಲಿ ಸೇವಾ ತಂಡದ ಸಂಯೋಜಕರಾದ ಎಮ್ ಸಿ ಶೇಖ್, ಬಿ ಬಿ ಅಸೂಟಿ, ಸ್ವಯಂ ಸೇವಕರಾದ ಶಿವಪ್ಪ ಬಳ್ಳಾರಿ, ವಾಸಿಮ್ ಖಾಜಿ, ಜಾರ್ಜ್ ದಂಡಾವತಿ, ಉಸ್ಮಾನ್ ಮಾಳೇಕೊಪ್ಪ, ದಾದಾಪೀರ್ ಮುಂಡರಗಿ, ನಾಗರಾಜ್ ಕುರಗೋಡ, ಮಹಮ್ಮದ್ ಬೆಟಗೇರಿ, ಸಾಗರ ಬಳ್ಳಾರಿ, ರಾಘವೇಂದ್ರ ಪಾಲನಕರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.