ಗದಗ

ಗೋವಾ ವಿಧಾನಸಭಾ ಸಂಕೀರ್ಣದ ರಜತ ಮಹೋತ್ಸವ: ಕರ್ನಾಟಕ ವಿಧಾನಸಭಾಧ್ಯಕ್ಷ ಜಿ.ಎಸ್‌. ಪಾಟೀಲ ಭಾಗಿ

ಗೋವಾ ವಿಧಾನಸಭಾ ಸಂಕೀರ್ಣದ ರಜತ ಮಹೋತ್ಸವ: ಕರ್ನಾಟಕ ವಿಧಾನಸಭಾಧ್ಯಕ್ಷ ಜಿ.ಎಸ್‌. ಪಾಟೀಲ ಭಾಗಿ
Silver Jubilee of the Goa Legislative Assembly Complex: Karnataka Legislative Assembly Speaker G.S.


ಗದಗ 07:  ಗೋವಾ ವಿಧಾನಸಭೆಯ ನೂತನ ಕಟ್ಟಡ ನಿರ್ಮಾಣಗೊಂಡು 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ (ಅ.7) ಆಯೋಜಿಸಲಾಗಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಜಿ.ಎಸ್‌. ಪಾಟೀಲ ಅವರು ವಿಶೇಷ ಆಹ್ವಾನಿತ ಅತಿಥಿಯಾಗಿ ಭಾಗವಹಿಸಿದರು.ಸಮಾರಂಭಕ್ಕೆ ವಿಶೇಷ ಆಹ್ವಾನಿತ ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಿಧಾನಸಭಾಧ್ಯಕ್ಷ ಜಿ.ಎಸ್‌. ಪಾಟೀಲ ಅವರನ್ನು ಗೋವಾ ರಾಜ್ಯಪಾಲರಾದ ಪುಷ್ಪಪತಿ ಅಶೋಕ್ ಗಜಪತಿ ರಾಜು ಹಾಗೂ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಗೋವಾ ವಿಧಾನಸಭಾ ಸಂಕೀರ್ಣವು 25 ವರ್ಷಗಳ ಸ್ವರ್ಣಯಾತ್ರೆಯನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನಡೆದ ಈ ಸಮಾರಂಭವು ರಾಜ್ಯದ ಶಾಸಕರಿಗೆ ಪರಂಪರೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಜನಪ್ರತಿನಿಧಿ ಸಂಸ್ಥೆಗಳ ಮಹತ್ವವನ್ನು ಪ್ರತಿಬಿಂಬಿಸಿತು. ವಿಧಾನಸಭಾ ವ್ಯವಸ್ಥೆಯ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾರಂಭದಲ್ಲಿ ಒತ್ತು ನೀಡಲಾಯಿತು.ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಜಿ.ಎಸ್‌. ಪಾಟೀಲ ಅವರು ಸಮಾರಂಭದಲ್ಲಿ ಪಾಲ್ಗೊಂಡಿರುವುದು. 

 ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಸೌಹಾರ್ದತೆ, ಸಹಕಾರ ಹಾಗೂ ಬಾಂಧವ್ಯದ ಸಂಕೇತವಾಗಿದೆ. ಉಭಯ ರಾಜ್ಯಗಳ ವಿಧಾನಸಭೆಗಳ ನಡುವಿನ ಪರಸ್ಪರ ಅನುಭವ ವಿನಿಮಯ ಹಾಗೂ ಉತ್ತಮ ಸಂಸದೀಯ ಪರಂಪರೆಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಮಹತ್ವದ ವೇದಿಕೆಯಾಗಿವೆ.ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೋವಾ ರಾಜ್ಯಪಾಲ ಪುಷ್ಪಪತಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ವಿಧಾನಸಭಾ ಸದಸ್ಯ ಮಾವಿನ್ ಗುಡಿನ್ಹೊ, ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯುರಿ ಅಲೆಮಾವ್ ಸೇರಿದಂತೆ ಗೋವಾ ವಿಧಾನಸಭೆಯ ಸದಸ್ಯರು, ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ