ಗದಗ

ಹುಲ್ಲೂರಿನಲ್ಲಿ ಹಜರತ್ ಮೆಹಬೂಬ್ ಸುಬ್ಬಾನಿ ಉರುಸು ಸಂಭ್ರಮದೊಂದಿಗೆ ಜರುಗಿತು

ಹುಲ್ಲೂರಿನಲ್ಲಿ ಹಜರತ್ ಮೆಹಬೂಬ್ ಸುಬ್ಬಾನಿ ಉರುಸು ಸಂಭ್ರಮದೊಂದಿಗೆ ಜರುಗಿತು


ಲಕ್ಷ್ಮೇಶ್ವರ 07:  ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಮಹಾ ಗುರುಗಳಾದ ಪೀರಾನೇಪೀಠ ಹಜರತ್ ಮೆಹಬೂಬ್ ಸುಬ್ಹಾನಿ ಅವರ ಉರುಸು ಕಾರ್ಯಕ್ರಮವು ಮಂಗಳವಾರ ಸಂಜೆ ಶ್ರದ್ದಾ ಭಕ್ತಿ ಸಂಭ್ರಮದೊಂದಿಗೆ ಜರುಗಿತು ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಿರಹಟ್ಟಿ ಮತಕ್ಷೇತ್ರದ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಅವರು ಮಾತನಾಡಿಇಂಥ ಚಿಕ್ಕ ಹುಲ್ಲೂರು ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಜಾತಿ ಭೇದ ಮರೆತು ಒಗ್ಗಟ್ಟಿನಿಂದ ಮಹಾ ಗುರುಗಳಾದ ಪಿರಾನೇಪೀಠ ಹಜರತ್ ಮಹಬೂಬ್ ಸುಬಾನಿ ಅವರ ಉರುಸು ಕಾರ್ಯಕ್ರಮವನ್ನು ಸಂಭ್ರಮದೊಂದಿಗೆ ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ನರಗುಂದ ಪತ್ರಿವನ ಮಠದ ಗುರುಸಿದ್ಧ ವೀರ ಶಿವಯೋಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಧರ್ಮದ ಮಾರ್ಗದಲ್ಲಿ ನಡೆದರೆ ಆ ಪರಮಾತ್ಮ ಎಲ್ಲರನ್ನು ಸನ್ಮಾರ್ಗದಲ್ಲಿ ಕೊಂಡುಯುತ್ತಾನೆ ಎಲ್ಲರೂ ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ನಾನು ನನ್ನದು ಎಂಬ ಅಹಂಕಾರವನ್ನು ದೂರ ಬಿಡಬೇಕು ಆ ದೇವರು ಕೊಟ್ಟ ಸಮಯದಲ್ಲಿ ನಾವು ಮಾಡುವ ಧರ್ಮ ಕಾರ್ಯಗಳು ಶಾಶ್ವತವಾಗಿ ನೆಲೆಸುತ್ತೆವೆ ಎಂದರು ಕಾರ್ಯಕ್ರಮದಲ್ಲಿ ಸಿದ್ದಯ್ಯ ಅಮೋಘಮಠ ಸ್ವಾಮಿಗಳು ಹುಲ್ಲೂರು,ವೇದಮೂರ್ತಿ ಸಿದ್ದಯ್ಯ ಹಿರೇಮಠ,ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹುಮಾಯಾನ್ ಮಾಗಡಿ,ಎಂ ಎಂ ಗಾಡ್ಗೋಳಿ, ಪರಮೇಶಗೌಡ ಪಾಟೀಲ, ಫಕ್ಕಿರೇಶ ರಗಟ್ಟಿ,ಸೇರಿದಂತೆ ಗ್ರಾಮದ ಸಮಸ್ತ ಗುರುಹಿರಿಯರು ಯುವಕ ಮಿತ್ರರ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರುನಂತರ ಜೂನಿಯರ್ ವಿಷ್ಣುವರ್ಧನ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.  


ಸುದ್ದಿ ಓದಿ