ಗದಗ

ಎಲ್ಲೆಂದರಲ್ಲಿ ಕೆಟ್ಟ ನಿಲುವ ಬಸ್ ಸಂಚಾರಕ್ಕೆ ತೊಂದರೆ

ಎಲ್ಲೆಂದರಲ್ಲಿ ಕೆಟ್ಟ ನಿಲುವ ಬಸ್ ಸಂಚಾರಕ್ಕೆ ತೊಂದರೆ


ಲಕ್ಷ್ಮೇಶ್ವರ  07: ಸರ್ಕಾರ ಉಚಿತ ಶಕ್ತಿ ಯೋಜನೆ ಪ್ರಾರಂಭಗೊಳಿಸಿದೆ ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ವಿನಹ ಹೊಸ ಬಸ್ಸುಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ ಇದರಿಂದ ಇರುವ ಹಳೆ ಬಸ್ಸುಗಳನ್ನೇ ಸಂಚಾರಕ್ಕೆ ಬಿಡುತ್ತಾರೆ ಅವುಗಳು ಎಲ್ಲಂದರಲ್ಲಿ ಕೆಟ್ಟು ನಿಂತು ಇತರೆ ವಾಹನ ಸಂಚಾರಕ್ಕೆ ಸಹ ತೊಂದರೆ ಉಂಟು ಮಾಡುತ್ತಿವೆ ಪಟ್ಟಣದ ಬಸ್ ನಿಲ್ದಾಣದ ಗದಗ ಮಾರ್ಗಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿ ಕೆಟ್ಟ ನಿಂತ ಸಾರಿಗೆ ಘಟಕದ ಬಸ್ ಕೆಟ್ಟು ನಿಂತಿರುವ ಬಸ್ಸನ್ನು ನೋಡಿ ಸಾರ್ವಜನಿಕರು ಸರ್ಕಾರಕ್ಕೆ ಮತ್ತು ಸಾರಿಗೆ ಘಟಕದ ವಿರುದ್ಧ ಇಡಿ ಶಾಪ ಹಾಕುತ್ತಿದ್ದಾರೆ ಇನ್ನಾದರೂ ಎಚ್ಚೆತ್ತುಕೊಂಡು ಸಾರಿಗೆ ಘಟಕದ ಅಧಿಕಾರಿಗಳು ಸಂಚಾರಕ್ಕೆ ಯೋಗ್ಯ ಇರುವ ಬಸ್ಸುಗಳನ್ನು ಓಡಿಸಲು ಮುಂದಾಗಬೇಕು ಎಂದು ಶಿಗ್ಲಿ ಗ್ರಾಮದ ಹಿರಿಯ ಮುಖಂಡರಾದ ಸೋಮಣ್ಣ ಡಾನಣಲ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ