ಬೆಳಗಾವಿ

ಕೋವಿಡ್‌ನಲ್ಲಿ ಅಗಲಿದವರಿಗೆ ಬೆಳಗಾವಿಯಲ್ಲಿ ಮುಕ್ತಿ ಪೂಜೆ

ಕೋವಿಡ್‌ನಲ್ಲಿ ಅಗಲಿದವರಿಗೆ ಬೆಳಗಾವಿಯಲ್ಲಿ ಮುಕ್ತಿ ಪೂಜೆ

ಕೋವಿಡ್ ಮಹಾಮಾರಿಯಲ್ಲಿ ಅಂತ್ಯಸಂಸ್ಕಾರ ಇಲ್ಲದೆ ಅನಾಥವಾಗಿ ಮೃತಪಟ್ಟವರ ಆತ್ಮಶಾಂತಿಗಾಗಿ ವಿಶೇಷ ಪೂಜೆ ನೆರವೇರಿದೆ. ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಸರ್ವ ಆತ್ಮಗಳ ಮುಕ್ತಿ ಮತ್ತು ಶಾಂತಿಗಾಗಿ ವಿಧಿ ಪೂಜೆ' ನಡೆಸಲಾಯಿತು.

ಕೋವಿಡ್ ಸಂದರ್ಭದಲ್ಲಿ ತಮ್ಮವರನ್ನು ಕಳೆದುಕೊಂಡು ಅಂತಿಮ ವಿಧಿ ಮಾಡಲಾಗದ ಕುಟುಂಬಗಳ ನೋವನ್ನು ಸ್ಮರಿಸಿ, ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಯಜ್ಞಕುಂಡದಲ್ಲಿ ಆಹುತಿ ನೀಡಿ, ಮೃತ ಆತ್ಮಗಳಿಗೆ ಸದ್ಗತಿ ಕೋರಲಾಯಿತು.ಈ ವೇಳೆ ಮಾಜಿ ಮೇಯರ್ ವಿಜಯ್ ಮೋರೆ, ಕಾರ್ಪೊರೇಟರ್ ಶಂಕರ್ ಪಾಟೀಲ್, ಗಂಗಾಧರ್ ಪಾಟೀಲ್, ಅಲನ್ ಮೋರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ