ಕರ್ನಾಟಕ ರಕ್ಷಣಾ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಘಟಪ್ರಭಾ, 7: ಕನ್ನಡ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಕಾರ್ಯದರ್ಶಿಯಾಗಿ ಪ್ರಕಾಶ್ ಬಿರನಾಳೆ ಹಾಗೂ ಮೂಡಲಗಿ ತಾಲೂಕು ಕಲಾವಿದರ ಸಂಘದ ಅಧ್ಯಕ್ಷರಾಗಿ ಅಲ್ಲಪ್ಪ ಕೌಜಲಗಿ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು ನಾಡು, ನುಡಿ, ನೆಲ-ಜಲ ಹಾಗೂ ಭಾಷೆಯ ರಕ್ಷಣೆಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ಸೂಚಿಸಿದರು.
ರಾಜ್ಯ ಗೌರವಾಧ್ಯಕ್ಷ ತಮ್ಮಣ್ಣ ಅರಭಾವಿ, ಗೋಕಾಕ ತಾಲೂಕು ಕರವೇ ಸಂಚಾಲಕ ಸಿದ್ದಪ್ಪ ತಳಗೇರಿ, ಮೂಡಲಗಿ ತಾಲೂಕು ಉಪಾಧ್ಯಕ್ಷ ಸುರೇಶ ಚಿಗಡೊಳ್ಳಿ, ಯಲ್ಲಪ್ಪ ಅಟ್ಟಿ ಮಿಟ್ಟಿ, ಶಶಿ ಚೌಕಶಿ, ಕಲ್ಲೊಳ್ಳಪ್ಪ ಗಾಡಿವಡ್ಡರ, ಮಂಜು ಪಾಟೀಲ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.