ಹೂವಿನ ಹಡಗಲಿ

ಚೌಡೇಶ್ವರಿ ಪುರಾಣ ಪ್ರವಚನ ದಸರಾಕ್ಕೆ ಮೆರಗು

ಚೌಡೇಶ್ವರಿ ಪುರಾಣ ಪ್ರವಚನ ದಸರಾಕ್ಕೆ ಮೆರಗು


ಹೂವಿನಹಡಗಲಿ 07 : ಪಟ್ಟಣದ ಗವಿಸಿದ್ದೇಶ್ವರ ಮಠದ ಮುಂಭಾಗದಲ್ಲಿ ಜರುಗುವ ಚೌಡೇಶ್ವರಿ ಪುರಾಣ ಪ್ರವಚನದಿಂದ ನಾಡಹಬ್ಬ ದಸರಾ ಉತ್ಸವಕ್ಕೆ ವಿಶೇಷ ಮೆರಗು ತಂದಿದೆ ಎಂದು ಶಾಖಾ ಗವಿಸಿದ್ದೇಶ್ವರ ಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಚೌಡೇಶ್ವರಿ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದಸರಾ ನಾಡಹಬ್ಬ ವಿಶೇಷ ಸ್ಥಾನಮಾನ ಹೊಂದಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೂಲಕ ಹಬ್ಬ ಆಚರಣೆಯಿಂದ ಹೂವಿನಹಡಗಲಿಯ ದಸರಾ ಸಂಭ್ರಮ ಮತ್ತಷ್ಟು ವೈಶಿಷ್ಟ್ಯ ಪೂರ್ಣವಾಗಿದೆ ಎಂದು ಹೇಳಿದರು.ಚೌಡೇಶ್ವರಿ ಸಂಘದ ಅಧ್ಯಕ್ಷ ವೀರೇಶ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಸಮಾಜದ ತಾಲೂಕಾಧ್ಯಕ್ಷ ಸಿ.ಕೆ. ಎಂ.ಬಸಲಿಂಗಸ್ವಾಮಿ, ವರ್ತಕ ಎಸ್‌.ಎಂ.ಎನ್‌. ಅಶೋಕ, ಎಚ್‌.ಎಂ. ಪಟ್ಟದಯ್ಯ ಸೇರಿದಂತೆ ಚೌಡೇಶ್ವರಿ ಸಂಘದ ಪದಾಧಿಕಾರಿಗಳು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ