ಪಿಎಚ್.ಡಿ. ಪದವಿ ಪಡೆದ ಪ್ರಾಧ್ಯಾಪಕ ಚೇತನ್ ಕುಮಾರ್
ಬೆಳಗಾವಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಧೀನದ ಕೆ.ಎಲ್.ಎಸ್. ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಚೇತನ್ ಕುಮಾರ್ ಟಿ.ಎಂ. ಅವರು ಪಿಎಚ್.ಡಿ. ಪದವಿ ಪಡೆದಿದ್ದಾರೆ.
‘ಸ್ಟಡಿ ಆಫ್ ಲೀಗಲ್ ಇಷ್ಯೂಸ್ ರಿಲೇಟೆಡ್ ಟು ಬಿಗ್ ಡೇಟಾ ವಿತ್ ಸ್ಪೆಷಲ್ ರೆಫರೆನ್ಸ್ ಟು ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್’ ವಿಷಯದ ಕುರಿತು ಅವರು ಪ್ರಬಂಧ ಮಂಡಿಸಿದ್ದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಡಾ. ರಾಜೇಂದ್ರಕುಮಾರ್ ಹಿಟ್ಟಣಗಿ ಅವರು ಮಾರ್ಗದರ್ಶನ ನೀಡಿದ್ದರು. ಕೆ.ಎಲ್.ಎಸ್. ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಚೇತನ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.