ಗಮನ ಸೆಳೆದ ಗೋವಿನಜೋಳದ ಹಾರ
ಗದಗ 07: ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸ್ವಾಗತಿಸಲು ಹಾಗೂ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಅಭಿಮಾನಿಗಳು ಅರ್ಿಸಿದ ಬೃಹತ್ ಗೋವಿನಜೋಳದ ಹಾರ, ಬುಧವಾರ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು.ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷದ ಸೇವಾ ಸಂಕಲ್ಪದ ಅಂಗವಾಗಿ ಆಯೋಜಿಸಿದ್ದ ‘ಸೇವಾಜ್ಯೋತಿ ಯಾತ್ರೆ’ ಹಾಗೂ ‘ವಿಕಸಿತ ಭಾರತದ ಸಂಕಲ್ಪ ಯಾತ್ರೆ’ ಹಿನ್ನೆಲೆಯಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.ಅನಿಲ ಮೆಣಸಿನಕಾಯಿ ಅವರ ಅಭಿಮಾನಿಗಳು 220ಕ್ಕೂ ಹೆಚ್ಚು ಗೋವಿನಜೋಳದ ತೆನೆಗಳನ್ನು ಬಳಸಿ, ಒಂದು ಕ್ವಿಂಟಲ್‌ಗೂ ಅಧಿಕ ತೂಕದ ಬೃಹತ್ ಹಾರ ಸಿದ್ಧಪಡಿಸಿದ್ದರು. ಕ್ರೇನ್ ಸಹಾಯದಿಂದ ಈ ಹಾರವನ್ನು ಅನಿಲ ಮೆಣಸಿನಕಾಯಿ ಅವರಿಗೆ ಹಾಕಿ ಗೌರವಿಸಲಾಯಿತು.
ಜತೆಗೆ ಕಂಬಳಿ ಹೊದಿಸಿ, ಕುರಿಯನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ತಮ್ಮ ನೆಚ್ಚಿನ ನಾಯಕನಿಗೆ ವಿನೂತನವಾಗಿ ಅರ್ಿಸುವ ಮೂಲಕ ಗೌರವ ಸಲ್ಲಿಸುವ ಉದ್ದೇಶದಿಂದ, ಅಭಿಮಾನಿ ಬಳಗದ ವಸಂತ ಪಡಗದ, ಸಿದ್ದು ಪಲ್ಲೇದ, ರಾಘವೇಂದ್ರ ಯಳವತ್ತಿ. ಮುತ್ತಣ್ಣ ಗದಗಿನ, ಇರ್ಷಾದ್ ಮಾನ್ವಿ, ಪ್ರವೀಣ್ ಕರಬಿಷ್ಟಿ, ಮೋಹನ ವರವಿ, ಪರಮೇಶ್ ನಾಯಕ, ಶರಣಪ್ಪ ಚಿಂಚಲಿ, ಬಸವರಾಜ್ ಕುರಿ, ಬಾಬು ಯಲಿಗಾರ್, ಬಸವರಾಜ್ ಕೋರಿ, ಚಂದ್ರು ಗುಡ್ಡಿಮಠ. ಸತ್ಯನಾರಾಯಣ ಘೋಡಕೆ, ರಾಮು ವಾಲ್ಮೀಕಿ, ಪ್ರವೀಣ ಅಂದೇಲಿ, ಬಸು ಪೊಲೀಸಪಾಟೀಲ, ಸಂಗು ಚಿತ್ತರಗಿ ಇತರರು ಈ ಬೃಹತ್ ಹಾರ ಅರ್ಿಸಿದರು.ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.