ಗಡಿ ಪ್ರದೇಶದ ವಿವಿಧ ಗ್ರಾಮಗಳಲ್ಲಿ ನವರಾತ್ರಿ ಉತ್ಸವ ದುರ್ಗಾ ಮಾತಾ ದೌಡ್ ಕಾರ್ಯಕ್ರಮ
ಸಂಬರಗಿ 11: ಗಡಿ ಪ್ರದೇಶದ ವಿವಿಧ ಗ್ರಾಮಗಳಲ್ಲಿ ನವರಾತ್ರಿ ಉತ್ಸವ ದುರ್ಗಾ ಮಾತಾ ದೌಡ್ ಕಾರ್ಯಕ್ರಮ ಪ್ರಾರಂಭವಾಗಿದೆ ಮತ್ತು ಸಂಬರಗಿ ಗ್ರಾಮದ ಅವಳೆ ತೋಟದ ವಸ್ತಿ ಮಹಾಲಕ್ಷ್ಮಿ ದುರ್ಗಾ ಮಾತಾ ಮಂಡಳ ಶಿವಶಂಕರ್ ಗಣೇಶೋತ್ಸವ ಮಂಡಳಿಯು ತುಳಜಾಪುರದಿಂದ ಸಂಬರಗಿಗೆ ಗ್ರಾಮದವರಿಗೆ 250 ಕಿಲೋಮೀಟರ್ ದೂರದಲ್ಲಿ ಕಾಲ್ನಡಿಗೆ ಮುಖಾಂತರ ಜ್ಯೋತಿಯನ್ನು ತಂದು ಶಿವಾಜಿ ಪ್ರತಿಮೆಯ ಬಳಿ ಬಹಳ ಉತ್ಸಾಹದಿಂದ ಸ್ವಾಗತಿಸಿತು.
ಐದನೇ ವರ್ಷದಲ್ಲಿ, ಈ ಮಂಡಳವು ತುಳಜಾಪುರದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಜ್ಯೋತಿ ಮತ್ತು ದುರ್ಗಾ ಮಾತೆಯ ವಿಗ್ರಹವನ್ನು ತಂದು ವಿಶೇಷ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಿತು. ತುಳಜಾಪುರದಿಂದ ಜ್ಯೋತಿ ಬಂದ ನಂತರ, ನೂರಾರು ಮಹಿಳೆಯರು ಗ್ರಾಮಗಳಲ್ಲಿ ಅದನ್ನು ಸ್ವಾಗತಿಸಿದರು. ವಿವಿಧ ಸಂಗೀತ ವಾದ್ಯಗಳ ಸಮ್ಮುಖದಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿ ಸಂಜೆ ಒಂಬತ್ತು ದಿನಗಳ ಕಾಲ ಕಾರ್ಯಕ್ರಮ ನಡೆಯಿತು. ಮಹಿಳೆಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ