ರಾಯಬಾಗ

ರಾಯಬಾಗ: ಮೈಸೂರು ದಸರಾ ‘ಚಿಗುರು ಕವಿಗೋಷ್ಠಿ’ಗೆ ಪಲ್ಲವಿ ಕಾಂಬಳೆ ಆಯ್ಕೆ

ರಾಯಬಾಗ: ಮೈಸೂರು ದಸರಾ ‘ಚಿಗುರು ಕವಿಗೋಷ್ಠಿ’ಗೆ ಪಲ್ಲವಿ ಕಾಂಬಳೆ  ಆಯ್ಕೆ


ರಾಯಬಾಗ 11:  ತಾಲೂಕಿನ ಜಲಾಲಪುರ ಗ್ರಾಮದ ಕವಯತ್ರಿ ಪಲ್ಲವಿ ಕಾಂಬಳೆ ಅವರು ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವದ ರಾಜ್ಯ ಮಟ್ಟದ ’ಚಿಗುರು ಕವಿಗೋಷ್ಠಿ’ಯಲ್ಲಿ ಕವನ ವಾಚನ ಮಾಡಲು ಆಯ್ಕೆಯಾಗಿದ್ದಾರೆ.  ದಸರಾ ಉತ್ಸವದ ನಿಮಿತ್ಯ ಅ. 13ರಿಂದ 17ರವರೆಗೆ ನಡೆಯುತ್ತಿರುವ ಪ್ರಮುಖ ಐದು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಲು ಆಯ್ಕೆಯಾಗಿರುವ ಬೆಳಗಾವಿ ಜಿಲ್ಲೆಯ ಏಕೈಕ ವ್ಯಕ್ತಿ ಇವರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ 15 ರಂದು ಹಿರಿಯ ಕವಿ ಅಗ್ರಹಾರ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಚಿಗುರು ಕವಿಗೋಷ್ಠಿಯಲ್ಲಿ ಕು. ಪಲ್ಲವಿ ಕಾಂಬಳೆಯವರು ಕವನ ವಾಚನ ಮಾಡಲಿದ್ದಾರೆ.ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ, ಕವಿಗಳಾದ ಶಿವಾನಂದ ಬೆಳಕೂಡ, ಶ್ರೀಕಾಂತ ರಾಯಮಾನೆ, ಶ್ರೀಶೈಲ್ ಶಿರೂರ, ಡಾ. ಎ. ಕೆ. ಜಯವೀರ, ಸುಖದೇವ ಕಾಂಬಳೆ, ಶಂಕರ ಕೊಡತೆ, ಸಾಗರ ಝೆಂಡೆನ್ನವರ, ಸೇರಿದಂತೆ ಅನೇಕ ಗಣ್ಯರು ಅವರನ್ನು ಅಭಿನಂದಿಸಿದ್ದಾರೆ. 


ಸುದ್ದಿ ಓದಿ