ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ 18ರಂದು ಹಿಂದೂ ಜಾಗೃತಿ ಧಾರ್ಮಿಕ ಕಾರ್ಯಕ್ರಮ

ರಾಣೆಬೆನ್ನೂರಲ್ಲಿ 18ರಂದು ಹಿಂದೂ ಜಾಗೃತಿ ಧಾರ್ಮಿಕ ಕಾರ್ಯಕ್ರಮ


ರಾಣೆಬೆನ್ನೂರು 12: ಹಿಂದೂ ಧರ್ಮದ ಪರಂಪರಾಗತ ವೈಭವವನ್ನು ಸಾರಲು ಪ್ರತಿ ವರ್ಷದಂತೆ ಈ ವರ್ಷವೂ ಸಹ, ರಾಣೆಬೆನ್ನೂರು ನಗರದ ಶ್ರೀ ಶಿವ ಪ್ರತಿಷ್ಠಾನ ಹಿಂದುಸ್ತಾನ ಇದೇ 18, 2026 ರಂದು ರವಿವಾರ ಸೂರ್ಯೋದಯ ಕಾಲ ಬೆಳಗಿನ 6-45 ಸಮಯದಲ್ಲಿ- 2026ನೇ ಸಾಲಿನ ಶ್ರೀ ದುರ್ಗಾ ಮಾತಾ ದೌಡ ಹಿಂದೂ ಜಾಗೃತಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದೆ.  

ಅಂದು ಸೂರ್ಯೋದಯ ಕಾಲ ನಗರದ ಜನನಿ ಬಿಡ ಪ್ರದೇಶವಾದ ಸಂಗಮ್ ವೃತ್ತದಿಂದ ಭಾರಿ ಮಹಿಳಾ ಸಮುದಾಯದ ಬೃಹತ್ ಮೆರವಣಿಗೆ ಧರ್ಮ ಜಾಗೃತಿ ಉತ್ಸವದ ಮೆರವಣಿಗೆ ನಡೆಯುವುದು.  

ಇಂದು ಸಂಸ್ಕೃತಿ ಮತ್ತು ಧರ್ಮ ಜಾಗೃತಿಯ ಸಂಕೇತವಾಗಿ ಅತ್ಯಂತ ಭಕ್ತಿ ಭಾವದೊಂದಿಗೆ ನಡೆಯುವ ಈ ಭವ್ಯ ಮೆರವಣಿಗೆಯಲ್ಲಿ ಹಿಂದೂ ಬಾಂಧವರು ಮತ್ತು ಮಾತಾ ಭಾಗವಹಿಸಿ ದೇಶದ ಪರಂಪರೆ ಸಾರಿ ಸಂಸ್ಕೃತಿಯ ಪುನರ್ ಸ್ಥಾಪನೆಗೆ ಸಾಕ್ಷಿ ಯಾಗಬೇಕೆಂದು ಶ್ರೀ ಶಿವ ಶಿವ ಪ್ರತಿಷ್ಠಾನ ಹಿಂದುಸ್ತಾನ ಪ್ರಕಟಣೆಯಲ್ಲಿ ಕೋರಿದೆ. 


ಸುದ್ದಿ ಓದಿ