ಬೆಳಗಾವಿ

ಗುರ್ಲಾಪುರ ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ.

ಗುರ್ಲಾಪುರ ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ.

ಗುರ್ಲಾಪುರ 14: ಕೇಂದ್ರ ಸರ್ಕಾರ ಸಂಧಾನ ವಿಫಲವಾದದ್ದನ್ನು ಖಂಡಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರ್ಲಾಪುರ ಕ್ರಾಸ್ನಲ್ಲಿ ಕಬ್ಬುಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಹೋರಾಟ ಪ್ರಾರಂಭವಾಗಿದೆ ಸಂಘದ ಗೌರವಾಧ್ಯಕ್ಷ ಪರಮ ಪೂಜ್ಯ ಶಶಿಕಾಂತ ಗುರೂಜಿ ಹಾಗೂ ಸಂಘದ ಅಧ್ಯಕ್ಷ ಮಹಾಲಕ್ಷ್ಮಿ ಮಹಾತ್ಮಗಾಂಧಿಜಿ ಭಾವಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆಗೆ ಚಾಲನೆ ನೀಡಿದರು. ಮುಖಂಡರ ಅನುಪಸ್ಥಿತಿಯಲ್ಲಿ ಅಥಣಿ, ರಾಯಬಾಗ, ಮೂಡಲಗಿ, ಗೋಕಾಕ ಸುತ್ತಮುತ್ತಲಿನ ಗ್ರಾಮಗಳಿಂದ ರೈತಮುಖಂಡರು, ಕೆ ಆರ್ ದೇವರಮನಿ, ಸದಾಶಿವ ನೇಮಗೌಡರ. ಮಹದೇವ ಕುಲಗೂಡ, ಶಿವಬಸುನೇಮಗೌಡರ, ವಿರೂಪಾಕ್ಷಿ ಮುಗಳಕೊಡ, ಅಥಣಿ ತಾಲೂಕ ಅಧ್ಯಕ್ಷ ಎಮ್ಸಿತಂಬುಳಿ, ಮುರುಗೇಂದ್ರ ಅರ್ಜುನಗಿ ಸುರೇಶ್ನಾಯಕ್, ಶ್ರೀಶೈಲಕೌಜಲಗಿ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ