ಮಹಲಿಂಗಪುರ

ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಮಹಾಲಿಂಗಪುರ 14 : ಭಾರತದ ಮುಖ್ಯ ಚನಾವಣಾ ಆಯುಕ್ತರಾದ ಜ್ಞಾನೇಶ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಪುರಸಭೆ ಮ್ಯಾನೇಜರ ಎಸ್‌.ಎನ್ ಪಾಟೀಲ ಅವರಿಗೆ ಮನವಿ ನೀಡಿದರು.  

   ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸ್ಥಳೀಯ ಅಧ್ಯಕ್ಷ ಮಹಾಲಿಂಗ ಮಾಲಿ ಮಾತನಾಡಿ ಪಟ್ಟಣದ ಸಾವೀರಾರು ಮತದಾರರ ಪರವಾಗಿ ಮನವಿ ಸಲ್ಲಿಸಿ, ಇತ್ತೀಚಿನ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಮ್ಮ ದೇಶದ ಅನೇಕ ಜೀವಂತ ಮತದಾರರ ಹೆಸರುಗಳು ಪಟ್ಟಿಯಿಂದ ಕಾಣೆಯಾಗಿವೆ, ಮತದಾರರ ಪಟ್ಟಿ ಸರಿಯಿಲ್ಲದ್ದರಿಂದ ಸ್ಥಳೀಯ ಸಂಸ್ಥೆ ಚುನಾವಣೆಯೂ ನ್ಯಾಯಸಮ್ಮತವಾಗಿ ನಡೆಯಲು ಸಾಧ್ಯವಿಲ್ಲ, ಆದ್ದರಿಂದ ಭಾರತ ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ ಕುಮಾರ ಅವರು ಈ ಲೋಪಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ಸ್ಥಳೀಯ ಪುರಸಭೆಯಿಂದ ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಮುಳಕ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಬೇಕೆಂದು ಆಗ್ರಹಿಸಿದರು.   ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಯಲ್ಲನಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ,ಬಸವರಾಜ ರಾಯರ, ಸಮರ್ಥ ಕೊಣ್ಣೂರ, ಅರ್ಜುನ ದೊಡಮನಿ, ನಜೀರ ಅತ್ತಾರ, ಮುಸ್ತಾಕ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಲಿಯಾಸ ಯಾದವಾಡ, ಜೀತು ಕೇಸರಗೋಪ್ಪ, ಸೈಯದಅಲಿ ಶೇಖ,ಮಲ್ಲಪ್ಪ ಬಾವಿಕಟ್ಟಿ, ಅಶೋಕ ಅಂಗಡಿ, ವಿಠ್ಠಲ ಸಂಶಿ, ಸತ್ಯಪ್ಪ ಹುದ್ದಾರ, ದಾದಾ ಕರೋಶಿ, ಡಾ. ಶಂಕರ ಹುಕ್ಕೇರಿ ರಸುಲ ಸಾಂಗ್ಲೀಕರ, ಎಂ.ಡಿ. ಆನಂದ ಶ್ರೀಶೈಲ ದೊಡಮನಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ