ಕೊಪ್ಪಳ

ಕೊಪ್ಪಳ ವಿವಿಗೆ ಸ್ವಂತ ಕಟ್ಟಡ, ನಿವೇಶನ ಒದಗಿಸಲು ಒತ್ತಾಯಿಸಿ ದಿ, 16 ರಂದು ಎಬಿವಿಪಿ. ಪ್ರತಿಭಟನೆ

ಕೊಪ್ಪಳ ವಿವಿಗೆ ಸ್ವಂತ ಕಟ್ಟಡ, ನಿವೇಶನ ಒದಗಿಸಲು ಒತ್ತಾಯಿಸಿ ದಿ, 16 ರಂದು ಎಬಿವಿಪಿ. ಪ್ರತಿಭಟನೆ

ಕೊಪ್ಪಳ 14: ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸೂಕ್ತ ನಿವೇಶನ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಕ್ಟೋಬರ್ 16ರಂದು ಬೆಳಗ್ಗೆ 10.30ಕ್ಕೆ ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಹಮ್ಮಿಗೇಶ್  ತಿಳಿಸಿದರು, ಅವರು ಬುಧವಾರ ನಗರದಲ್ಲಿರುವ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಸರಕಾರಕ್ಕೆ ಎಚ್ಚರಿಸಿದರು.

*ಪ್ರಮುಖ ಬೇಡಿಕೆಗಳು:* ಕೊಪ್ಪಳ ವಿಶ್ವವಿದ್ಯಾಲಯಕ್ಕೆ ತಕ್ಷಣವೇ ಸೂಕ್ತವಾದ ಸರ್ಕಾರಿ ನಿವೇಶನವನ್ನು ಗುರುತಿಸಿ ಮಂಜೂರು ಮಾಡಬೇಕು. ಸ್ವಂತ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕಾಲಮಿತಿಯೊಳಗೆ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಆಡಳಿತ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಭವಿಷ್ಯದ ವಿಸ್ತರಣೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಕ್ಯಾಂಪಸ್ ಯೋಜನೆಯನ್ನು ರೂಪಿಸಬೇಕು.ಜಿಲ್ಲಾಡಳಿತವು ಸರ್ಕಾರಕ್ಕೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಹಾಗೂ ಅನುದಾನ ಕೊಡಿಸಬೇಕು. ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಂಚಾಲಕ ಹಮ್ಮಿಗೇಶ . ಹಾಗೂ ನಗರ ಕಾರ್ಯದರ್ಶಿ ಆದಿತ್ಯ ಹವಳೇ ರವರು ಜಂಟಿಯಾಗಿ ಸರಕಾರಕ್ಕೆಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಎಬಿವಿಪಿ ಪದಾಧಿಕಾರಿಗಳಾದ ಸುಮಂಗಳ ನಾಗರಾಜ್ ಮತ್ತು ಜಯಶ್ರೀ ಮೇ ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು, 


ಸುದ್ದಿ ಓದಿ