ನಂ 14 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೆಳನ
ಕಂಪ್ಲಿ 13: ಪಟ್ಟಣದ ಸಾಂಗತ್ರಯ್ಯ ಪಾಠಶಾಲೆ ಹತ್ತಿರದ ವೀರಶೈವ ಭವನದಲ್ಲಿ ಕಂಪ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಹಿನ್ನಲೆಯಲ್ಲಿ ಭಾನುವಾರ ಮುಂದೂಡಿದ ಪೂರ್ವಭಾವಿ ಸಭೆ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ಎರಡನೇ ಕಂಪ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ.14ರಂದು, ಒಂದು ದಿನದ ಸಮ್ಮೇಳನವನ್ನು ವೀರಶೈವ ಭವನದಲ್ಲಿ ನಡೆಸಲು ತೀರ್ಮಾನಿಸಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ, ವೇದಿಕೆ, ಮಹಾದ್ವಾರಗಳಿಗೆ ಹೆಸರು ನಿಗಧಿಪಡಿಸಲು ಕಸಾಪ ತಾಲೂಕು ಸಮಿತಿ ತೀರ್ಮಾನಕ್ಕೆ ಬಿಟ್ಟಿದೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ, ನ್ಯೂನತೆಗಳಿಲ್ಲದಂತೆ ನಡೆಸುವಂತೆ, ಸಮ್ಮೇಳನ ನಡೆಸುವಂತೆ, ಸಮ್ಮೇಳನಕ್ಕೆ ಬೇಕಾದ ಹಣವನ್ನು ದೇಣಿಗೆ ಮೂಲಕ ಸಂಗ್ರಹಿಸುವಂತೆ, ಕಸಾಪ ಕೇಂದ್ರ ಕಚೇರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸುವಂತೆ ಸಭೆಯಲ್ಲಿ ಪಾಲ್ಗೊಂಡವರು ಸೂಚಿಸಿದರು. ಪ್ರಮುಖರಾದ ಅರವಿ ಬಸವನಗೌಡ, ಬಿ.ಸಿದ್ದಪ್ಪ, ಕೆ.ಎಂ.ಹೇಮಯ್ಯಸ್ವಾಮಿ, ಎಸ್.ಎಂ.ನಾಗರಾಜ, ಎನ್.ಹಬೀಬ್‌ರೆಹಮಾನ್, ಹನುಮಂತಪ್ಪ, ಎಲಿಗಾರ ನಾಗರಾಜ, ಬಿ.ಅಂಬಣ್ಣ, ಎಲ್.ರಾಘವೇಂದ್ರ, ಡಾ.ವೆಂಕಟೇಶ್, ಕಲ್ಗುಡಿ ವಿಶ್ವನಾಥ, ಬಿ.ರಮೇಶ್, ಶಿಕಾರಿ ರಾಮು, ಅಯ್ಯೋದಿ ವೆಂಕಟೇಶ, ಎಂ.ಉಸ್ಮಾನ್, ಇಟಗಿ ವಿರುಪಾಕ್ಷಿ, ಬೀರಲಿಂಗ, ಹಂಚಿನಾಳ್ ಪೀರಾವಲಿ, ಎಸ್.ರಾಮು, ಎಂ.ಮಮತಾ, ಕಲ್ಗುಡಿ ನಾಗರತ್ನ, ಕಸಾಪ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ, ಖಜಾಂಚಿ ಎಸ್.ಡಿ.ಬಸವರಾಜ, ಪದಾಧಿಕಾರಿಗಳಾದ ಎ.ಸಿ.ದಾನಪ್ಪ, ಕೆ.ಎಂ.ಹೇಮಯ್ಯಸ್ವಾಮಿ, ಎಲಿಗಾರ ವೆಂಕಟರೆಡ್ಡಿ, ಹಾದಿಮನಿ ಕಾಳಿಂಗವರ್ಧನ, ಎಸ್.ಶಾಮಸುಂದರರಾವ್, ಯು.ಎಂ.ವಿದ್ಯಾಶಂಕರ್ ಸೇರಿ ಇತರರಿದ್ದರು.