ಕೊಪ್ಪಳ

ತುಂಗಭದ್ರಾ ನದಿ ತೀರ ಒತ್ತುವರಿ ತೆರವುಗೊಳಿಸಲು ನಾಗರಾಜ್ ಒತ್ತಾಯ

ತುಂಗಭದ್ರಾ ನದಿ ತೀರ ಒತ್ತುವರಿ ತೆರವುಗೊಳಿಸಲು ನಾಗರಾಜ್ ಒತ್ತಾಯ

ಕೊಪ್ಪಳ  13: ತಾಲೂಕಿನ ಯೋಜನಾ ಪ್ರದೇಶವಾದ ಮುನಿರಾಬಾದ್ ಡ್ಯಾಮಿನ ತುಂಗಭದ್ರ ನದಿ ಪಕ್ಕದಲ್ಲಿರುವ ತಾಲೂಕಿನ ಹೊಳೆ ಮೊದಲಾಪುರ ಗ್ರಾಮದ ಹತ್ತಿರದಲ್ಲಿನಟರಾಜ್ ಮತ್ತು ದೀಪಕ್ ಎಂಬುವವರು ತುಂಗಭದ್ರಾ ನದಿ ತೀರವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸಲು ಮುನಿರಾಬಾದ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ್ ರವರು ಸರಕಾರಕ್ಕೆ ಒತ್ತಾಯಿಸಿದ್ದಾರೆ, ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ದೂರು ಸಲ್ಲಿಸಿ ಸರ್ಕಾರಕ್ಕೆ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಆಗ್ರಹ ಪಡಿಸಿದ ಅವರು ಪಿ. ನಟರಾಜ್ ತಂದೆ: ಪಿ. ಪೆರುಮಾಳ್, ಟಿ.ಬಿ. ಡ್ಯಾಂ ಹಾಗೂ ಹೊಸಪೇಟೆಯ ದೀಪಕ್ ಅವರು ರೈತರಿಂದ ಭೂಮಿ ಖರೀದಿಸಿ, ನೈಸರ್ಗಿಕವಾಗಿ ನೀರು ಹರಿಯುವ ನದಿ ತೀರವನ್ನು  ಅನಧಿಕುರ್ಥವಾಗಿ ಕಬ್ಜಾ ಮಾಡಿ ಗೋಡೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ,      ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ 40 ಮೀಟರ್ ಖಾಲಿ ಜಾಗ ಬಿಡಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿದೆ ಎಂದು ಅವರು ಟೀಕಿಸಿದ್ದಾರೆ,    ನದಿ ತೀರದ ಒತ್ತುವರಿ ಮತ್ತು ತಂತಿ ಬೇಲಿ/ಗೋಡೆ ನಿರ್ಮಾಣ ದಿಂದಾಗಿ ಜಾನುವಾರುಗಳಿಗೆ ಮೇವು, ನೀರು ಕುಡಿಯಲು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸ ಬೇಕೆಂದು ಹೇಳಿದ ಅವರು, ನಿಯಮ ಉಲ್ಲಂಘನೆವಾದ ಭೂ ಪರಿವರ್ತನೆ (ಎನ್‌ಎ) ಆದೇಶ ರದ್ದುಪಡಿಸುವುದು ಹಾಗೂ ಖರೀದಿಸಿದ ಮತ್ತು ಕಬ್ಜಾ ಮಾಡಿಕೊಂಡ ಜಮೀನಿನ ವಿಸ್ತೀರ್ಣ ಪರೀಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದು ಅವಶ್ಯಕವಾಗಿದೆ ಎಂದು ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಮ್ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡಿನ ಮಾಜಿ ಸದಸ್ಯ ನಾಗರಾಜ್ ಅವರು ಕೊಪ್ಪಳ ಜಿಲ್ಲಾಧಿಕಾರಿ ರವರಿಗೆ ದೂರು ಸಲ್ಲಿಸಿ, ಕೂಡಲೆ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರೀಶೀಲನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಒತ್ತುವರಿಯಾಗಿರುವ ಸ್ಥಳಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ, 


ಸುದ್ದಿ ಓದಿ