ಮೃತ್ಯುಂಜಯ ಸಾಂಸ್ಕೃತಿಕ ಭವನವು ಘಟಪ್ರಭಾದ ಕೀರೀಟ ಎನಿಸಿದೆ : ಶ್ರೀಕಾಂತ ವಿ ಮಹಾಜನ
ಘಟಪ್ರಭಾ 13 : ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರ್ಮಿಕ ಸಾಮಾಜಿಕ ಆಧ್ಯಾತ್ಮಿಕ ಕಾರ್ಯಕ್ರಮಗಳ ಆಚರಣೆಗಳಿಗೆ ಆಶ್ರಯ ತಾಣ ಮತ್ತು ಘಟಪ್ರಭಾದ ಮಧ್ಯವರ್ತಿ ಸ್ಥಳದಲ್ಲಿ ಇರುವ ಶ್ರೀ ಮೃತ್ಯುಂಜಯ ಸಾಂಸ್ಕೃತಿಕ ಭವನವು ಘಟಪ್ರಭಾದ ಕೀರೀಟ ಎನಿಸಿದೆ ಎಂದು ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಹೇಳಿದರು. ಅವರು ಶಿವಾನುಭವ ಕೇಂದ್ರ ಮತ್ತು ಅಕ್ಕನ ಬಳಗಗಳ ಸಂಯುಕ್ತ ಆಶ್ರಯದಲ್ಲಿ, ಶ್ರೀ ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ನಡೆದಿರುವ ಶರನನವರಾತ್ರಿ ಉತ್ಸವದ ಅಂಗವಾಗಿ ನಡೆದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಸೋಮವಾರದಂದು ಅತಿಥಿಗಳಾಗಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಪ್ರಕಾಶ ಡಾಂಗೆ ಮಾತನಾಡಿ ಈ ನವರಾತ್ರಿ ಉತ್ಸವ ಸರ್ವರಿಗೂ ಒಳ್ಳೆಯದು ಮಾಡಲಿ ಎಂದರು. ಅಕ್ಕನ ಬಳಗದ ಅಧ್ಯಕ್ಷೆ ಸುನಂದಾ ಖಡಬಡಿ, ಡಾ ಎಸ್ ಕೆ ಕೋಣಿನ ಮಾತನಾಡಿ ಎಲ್ಲಾ ಗುರು ಹಿರಿಯರ ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಘಟಪ್ರಭಾ ಮತ್ತು ಸುತ್ತಮುತ್ತಲಿನ ಹತ್ತು ಹಳ್ಳಿಗಳ ಮಂಗಲ ಕಾರ್ಯಗಳಿಗೆ ಆಸರೆ ಆಗಿದೆ ಆದ್ದರಿಂದ ಇದು ಘಟಪ್ರಭಾ ಭಾಗದ ಕೀರೀಟ ಎನಿಸಿದೆ ಎಂದರು. ಗುರುಬಸಯ್ಯಾ ಕಪೂರಮಠ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ,ಶಂಕರಯ್ಯಾ ವಸ್ತ್ರದ, ಶಿವು ಮತ್ತು ಚನ್ನು ಕಪೂರಮಠ ಸಹೋದರರು ವೇದಿಕೆಯಲ್ಲಿದ್ದರು.ನೂರಾರು ಮಹಿಳೆಯರು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.